BREKKING NEWS ತಿಹಾರ ಜೈಲಲ್ಲಿ ಬಂಧಿಯಾದ ಬಂಡೆ ಡಿಕೆಶಿ
ತಿಹಾರ ಜೈಲಲ್ಲಿ ಬಂಧಿಯಾದ ಬಂಡೆ ಡಿಕೆಶಿ
ನವದೆಹಲಿಃ ಮಹಾ ನಗರದ ಆರ್.ಎಂ.ಎಲ್. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದ್ದ ಡಿಕೆಶಿಯನ್ನು ಇಂದು ತಿಹಾರ್ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಡಿಕೆಶಿ ಆರೋಗ್ಯ ಸುಧಾರಿಸಿರುವ ಕುರಿತು ಆರ್.ಎಂ.ಎಲ್.ಆಸ್ಪತ್ರೆಯವರು ನೀಡಿದ ವರದಿ ಆಧರಿಸಿ ಡಿಕೆಶಿಯನ್ನು ತಿಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಅಕ್ರಮ ಆಸ್ತಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿಕೆಶಿಯನ್ನು ಇಡಿ 14 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿತ್ತು.
ಸುಪ್ರೀಂಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶಿಸಿತ್ತು. ಆ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ತಿಹಾರ ಜೈಲಿಗೆ ಕರೆದೊಯ್ದಿದ್ದಾರೆ.
ಮದ್ಯಾಹ್ನ ಡಿಕೆಶಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಯಲಾಗಿದ್ದು, ಜಾಮೀನು ದೊರೆಯಲಿದೆಯೋ ಇಲ್ಲವೋ ಎಂಬುದು ತಿಳಿಯಲು ಕಾಯಬೇಕಿದೆ.
ಆದರೆ ಸಧ್ಯ ಡಿಕೆಶಿ ಇಂದು ಮಧ್ಯಾಹ್ನ ತಿಹಾರ ಜೈಲೂಟ ಮಾಡವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಿಂದ ತಿಹಾರ ಜೈಲಿಗೆ ಹೋದ ಮೊದಲ ರಾಜಕಾರಣಿ ಇವರಾಗಿದ್ದಾರೆ. ತಿಹಾರ ಜೈಲು ಏಷ್ಯಾ ಖಂಡದಲ್ಲಿಯೇ ಅತಿ ದೊಡ್ಡ ಜೈಲು ಇದಾಗಿದೆ.