ಪ್ರಮುಖ ಸುದ್ದಿ

ಕಾಶ್ಮೀರ ಭಾರತದ ಪುಣ್ಯ ಭೂಮಿ-ಶ್ರೀಕಾಂತ ಕುಲಕರ್ಣಿ

ಶಹಾಪುರದಲ್ಲಿ ರಾಷ್ಟ್ರೀಯ ಏಕತಾ ಅಭಿಯಾನ

ಕಾಂಗ್ರೆಸ್‍ನ ತುಷ್ಠೀಕರಣದ ರಾಜಕಾರಣಕ್ಕೆ ಕೊನೆ

ಯಾದಗಿರಿಃ ದೇಶದ ಜನತೆಗೆ ವಾಗ್ದಾನ ನೀಡಿದಂತೆ, ಒಂದು ದೇಶ ಒಂದು ಸಂವಿಧಾನ ಎಂಬ ಆಶ್ವಾಸನೆ ಜಾರಿಯಾಗಿದೆ. ಹಲವು ದಶಕಗಳ ಕಾಲ ಒಡೆದು ಆಳುವ ಮತ್ತು ತುಷ್ಠೀಕರಣ ರಾಜಕಾರಣಕ್ಕೆ ಇಂದು ಕೊನೆಯಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸಂವಿಧಾನದ 370ನೇ ಕಲಂ ಮತ್ತು 35(ಎ) ವಿಧಿಯನ್ನು ರದ್ದು ಪಡಿಸುವದಾಗಿ ನೀಡಿದ್ದ ಮಾತನ್ನು ಉಳಿಸಿಕೊಂಡಿದೆ ಎಂದು ಜಮಖಂಡಿಯ ಮಾಜಿ ಶಾಸಕÀ ಶ್ರೀಕಾಂತ ಕುಲಕರ್ಣಿ ತಿಳಿಸಿದರು.

ಜಿಲ್ಲೆಯ ಶಹಾಪುರ ನಗರದ ಬಿಜೆಪಿ ಕಚೇರಿಯಲ್ಲಿ ರಾಷ್ಟ್ರೀಯ ಏಕತಾ ಅಭಿಯಾನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಸ್ಪಷ್ಟ ಬಹುಮತದಿಂದ ಆಡಳಿತಕ್ಕೆ ಬಂದ 100 ದಿನಗಳಲ್ಲೇ 70 ವರ್ಷದ ಇತಿಹಾಸ ಹೊಂದಿದ್ದ 370 ಮತ್ತು 35 (ಎ) ಕಲಂನ್ನು ಮುಕ್ತಗೊಳಿಸಿದರು.

ಕಾಶ್ಮೀರದ ಸಮಸ್ಯೆಯನ್ನು ಜೀವಂತವಾಗಿಡುತ್ತ ಬೇಳೆ ಬೇಯಿಸುಕೊಳ್ಳುತ್ತಿದ್ದ ಹಲವು ರಾಜಕಾರಣಿಗೆ ನುಂಗಲಾರದ ಬಿಸಿ ತುಪ್ಪವಾಗಗಿದೆ. ಕೆಲವರಂತೂ ಪ್ರದೇಶದ ಅಭಿವೃದ್ಧಿ ಮಾಡದೇ ದೇಶದ ಸಂಪತ್ತನ್ನು ಲೂಟಿ ಮಾಡುತ್ತಾ ತಮ್ಮ ಕುಟುಂಬದ ಸ್ವಹಿತಾಸಕ್ತಿ ಕಾಪಾಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹಿಂದೂ ಧರ್ಮದ ಪರಂಪರೆಯನ್ನು ಹೊತ್ತ ಕಾಶ್ಮೀರ ಭಾರತ ದೇಶದ ಪುಣ್ಯ ಭೂಮಿಯಾಗಿದೆ. ಅಂದು ಶಂಕರರಾಚಾರ್ಯರು ಕಾಶ್ಮೀರದ ಭೂಮಿಯಲ್ಲಿ ಮಹಾ ತಪಸ್ಸು ಮಾಡುವ ಮೂಲಕ ಸನಾತನ ಧರ್ಮ ಸಂಸ್ಕøತಿಗೆ ಮೇಲ್ಪಂಕ್ತಿಯಾಗಿದ್ದಾರೆ ಎಂದು ಸ್ಮರಿಸಿದ ಅವರು, ಕಾಶ್ಮೀರಿ ಅತ್ಯಂತ ಶ್ರೇಷ್ಠ ಭೂಮಿಯಾಗಿದೆ.

ಈ ಭೂಮಿಯನ್ನು 370 ಕಲಂ ಹಾಗೂ 35(ಎ) ಜಾರಿಗೊಳಿಸುವಾಗ ಸಂವಿಧಾನ ಶಿಲ್ಪಿಯಾದ ಡಾ.ಅಂಬೇಡ್ಕರವರೇ ಅದನ್ನು ವಿರೋಧಿಸಿದ್ದರು. ಅಂದಿನ ಜವಾಹರಲಾಲ್ ನೆಹರು ಅವರು ಒತ್ತಡದಿಂದ ಕಾಶ್ಮೀರ ಇಂದಿನವರೆಗೂ ದೇಶದ ಸಂಪತ್ತು ಹಣ ಕಬಳಿಸುತ್ತಾ ಪ್ರತ್ಯೇಕ ರಾಜ್ಯವನ್ನಾಗಿಸಿಕೊಂಡು ಮೆರೆಯಿತು ಎಂದು ದೂರಿದರು.

ಇಂದಿನ ಬಿಜೆಪಿ ಪ್ರಧಾನಿ ಮೋದಿಜಿಯವರು ಕ್ಷಣಾರ್ಧದಲ್ಲಿ ಅದನ್ನು ಮೊಟಕುಗೊಳಿಸಿ ಕಾಶ್ಮೀರದಿಂದ ಕನ್ಯಾಕುಮಾರಿ ಯವರೆಗೆ ಏಕತಾ ರಾಷ್ಟ್ರ ನಿರ್ಮಾಣ ಮಾಡಿದ್ದಾರೆ ಎಂದರು.

ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಮಾತನಾಡಿ, ಕಾಶ್ಮೀರದಲ್ಲಿ 370 ಮತ್ತು 35(ಎ)ನಿಂದ ಅಲ್ಲಿನ ಜನ ಸಾಮಾನ್ಯರಿಗೂ ಶೋಷಣೆ ಉಂಟಾಗಿತ್ತು.

ಅಲ್ಲಿನ ಮಹಿಳೆಯರಿಗೆ ಭಾರತ ದೇಶದಲ್ಲಿನ ಯಾವುದೇ ರಾಜ್ಯದ ಪುರುಷರೊಂದಿಗೆ ಮದುವೆಯಾಗುವದಕ್ಕೂ ಹಕ್ಕು ಇರಲಿಲ್ಲ. ಇಂದು ಭಾರತದಲ್ಲಿ ಯಾವ ರಾಜ್ಯದಲ್ಲೂ ಅವರು ವಾಸ ಮಾಡಬಹುದಾಗಿದೆ. ಪ್ರಧಾನಿ ಮೋದಿಜಿಯವರ ಪರಿಶ್ರಮದಿಂದ ದೇಶದಲ್ಲಿ ಇಂದು ಕಾಶ್ಮೀರ ನಿರಾಳವಾಗಿದೆ.

ಇದೀಗ ಭಾರತೀಯರೆಲ್ಲರೂ ಅವರ ಸ್ವ-ಇಚ್ಛಾನುಸಾರ ಜಮ್ಮು-ಕಾಶ್ಮಿರದ ಶಾಶ್ವತ ನಿವಾಸಿಗಳಾಗಬಹುದು. ಇತರೆ ರಾಜ್ಯಗಳಂತೆ ಮೀಸಲಾತಿಯು ಜಾರಿಯಾಗಲಿದೆ ಎಂದರು.

ಸಮಾರಂಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಅಮಾತೆಪ್ಪ ಕಂದಕೂರ, ಡಾ.ಚಂದ್ರಶೇಖರ ಸುಬೇದಾರ, ವೆಂಕಟರಡ್ಡಿ ಅಬ್ಬೆತುಮಕೂರ, ಮಲ್ಲಿಕಾರ್ಜುನ ಚಿಲ್ಲಾಳ, ಗೋಪಾಲ ದಾಸನಕೇರಿ, ಅಡಿವೆಪ್ಪಾ ಜಾಕಾ, ಮಲ್ಲಯ್ಯ ಸ್ವಾಮಿ, ರಾಜಶೇಖರ ಗೂಗಲ್, ಯಲ್ಲಯ್ಯ ನಾಯಕ ವನದುರ್ಗಾ, ಮರೆಪ್ಪ ಹಯ್ಯಾಳಕರ್ ಉಪಸ್ಥಿತರಿದ್ದರು.

ಗೂಳಪ್ಪ ಬಾಳಿ, ಅಶೋಕ ಟಣಕೆದಾರ, ಅಪ್ಪಣ್ಣ ದಶವಂತ, ಸಂತೋಷ ಭಾಸುತ್ಕರ್, ಗುಂಡು ಬಳಂಕರ್, ಮಲ್ಲಿಕಾರ್ಜುನ ಜವಳಿ, ಗುರಪ್ಪ ಮದ್ದಿನ್, ಸುಧೀರ ಚಿಂಚೋಳಿ, ಮಹ್ಮದ ಅಲಿ, ದೇವಿಂದ್ರಪ್ಪ ಪೂಜಾರಿ, ಬಸವರಾಜ ಮಡ್ನಾಳ, ಅನಂತರಾವ ದೇಶಪಾಂಡೆ, ಉಮೇಶ ಮಹಾಮನಿ, ರಾಜು ಬಾಣತಿಹಾಳ ಸೇರಿದಂತೆ ಇತರರು ಭಾಗವಹಿಸಿದ್ದರು. ಗುರು ಕಾಮಾ ಸ್ವಾಗತಿಸಿದರು. ಬಸವರಾಜ ಆನೇಗುಂದಿ ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

Back to top button