ಮತಕ್ಷೇತ್ರದ ಅಭಿವೃದ್ಧಿಯೇ ನನ್ನ ಉಸಿರುಃ ಶಾಸಕ ಕಂದಕೂರ
ಮೋಟ್ನಳ್ಳಿ ಗ್ರಾಮದಲ್ಲಿ ಅಡಿಗಲ್ಲು ಸಮಾರಂಭ…
ಯಾದಗಿರಿಃ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸದಾ ಬದ್ದನಾಗಿದ್ದೇನೆ ಎಂದು ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಹೇಳಿದರು.
ಅವರು ಇಂದು ಗುರುಮಠಕಲ್ ಮತಕ್ಷೇತ್ರದ ಮೋಟ್ನಳ್ಳಿ ಗ್ರಾಮದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿಯಲ್ಲಿ 3 ಕೋಟಿ 14 ಲಕ್ಷ ರೂ ವೆಚ್ಚದ ಯಾದಗಿರಿ ತಾಲೂಕಿನ ಅರಕೇರಾ ದಿಂದ ಮೋಟ್ನಳ್ಳಿ ರಸ್ತೆ ಸುಧಾರಣೆ ಕಾಮಗಾರಿಯ ಅಡಿಗಲ್ಲು ಸಮಾರಂಭವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಾ, ಈ ಹಿಂದೆ ನೆಚ್ಚಿನ ನಾಯಕರಾದ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಮತಕ್ಷೇತ್ರಕ್ಕೆ ಬಿಡುಗಡೆಯಾದ ಕಾಮಗಾರಿಗಳನ್ನು ಹಿಂಪಡೆದಿದ್ದು ಸಿಎಂ. ಯಡಿಯೂರಪ್ಪನವರ ನೀಚ ರಾಜಕಾರಣವು ಕಾರಣವಾಗಿದೆ.
ಇದರಿಂದ ಮತಕ್ಷೇತ್ರದ ಹೆಚ್ಚಿನ ಅಭಿವೃದ್ಧಿಗೆ ಹಿನ್ನೆಡೆಯಾದುದ್ದು ವಿಷಾಧನೀಯವಾಗಿದೆ. ಇನ್ನೂ ಬರುವ ದಿನಗಳಲ್ಲಿ ಈ ನಿಟ್ಟಿನಲ್ಲಿ ಹೋರಾಟ ಮಾಡುವ ಮೂಲಕ ಹಿಂಪಡೆದ ಕಾಮಗಾರಿಗಳನ್ನು ಆರಂಭಿಸಿ ಅಭಿವೃದ್ಧಿಯನ್ನು ಮಾಡುತ್ತೇನೆ ಮತ್ತು ಮತ್ತಷ್ಟು ಹೊಸ ಕಾಮಗಾರಿಗಳನ್ನು ತರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಶಿವಲಿಂಗಪ್ಪ ಪುಟಗಿ, ಜಿ. ತಮ್ಮಣ್ಣ, ಭೋಜಣಗೌಡ ಯಡ್ಡಳ್ಳಿ, ರಾಮಣ್ಣ ಬಳಿಚಕ್ರ, ಬಸುಗೌಡ ಬಿಳ್ಹಾರ್, ತಾಪಂ ಸದಸ್ಯರಾದ ತಿಪ್ಪಣ್ಣ ಯಾದವ್, ಮಲ್ಲಿಕಾರ್ಜುನ ಅರುಣಿ, ಸಣ್ಣೆಪ್ಪ ಕೋಟಗೇರಾ, ಶರಣಪ್ಪಗಾಡಿ ಮೋಟ್ನಳ್ಳಿ, ವೀರಯ್ಯಸ್ವಾಮಿ ಮೋಟ್ನಳ್ಳಿ, ಭೀಮಪ್ಪ, ವೆಂಕಟರಮಣ ನಾಟೇಕರ ಮತ್ತಿತರರು ಇದ್ದರು.