ಪ್ರಮುಖ ಸುದ್ದಿ
ಸಿದ್ರಾಮಯ್ಯ ಪ್ರಸ್ತುತ ನಿರುದ್ಯೋಗಿ-ಶ್ರೀರಾಮುಲು
ಸಿದ್ರಾಮಯ್ಯ ಸದ್ಯ ನಿರುದ್ಯೋಗಿ- ಶ್ರೀರಾಮುಲು ತಿರುಗೇಟು
ಮಡಿಕೇರಿಃ ಕೇಂದ್ರ ನೆರೆ ಪರಿಹಾರ ಒದಗಿಸುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಿಎಂ ಸಿದ್ರಾಮಯ್ಯ ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಆರೋಗ್ಯ ಸಚಿವ ಶ್ರೀರಾಮುಲು, ಸಿದ್ರಾಮಯ್ಯ ಸದ್ಯ ನಿರುದ್ಯೋಗಿ ಹೀಗಾಗಿ ಇಂತಹ ಹೇಳಿಕೆಯನ್ನು ನೀಡುತ್ತಾರೆ ಎಂದಿದ್ದಾರೆ.
ಕೇಂದ್ರದಿಂದ ನೆರೆ ಪರಿಹಾರ ಬರಲಿದೆ. ಸರ್ಕಾರ ಇನ್ನೂ ಮೂರು ವರ್ಷ ಪೂರ್ಣ ಗೊಳಿಸಲಿದೆ.
ನಾನು ಆರೋಗ್ಯ ಸಚಿವನಾಗಿ ಎಷ್ಟು ದಿವಸ ಇರಲಿದ್ದೇನೆ ಗೊತ್ತಿಲ್ಲ. ಕಾರಣ ಆಸ್ಪತ್ರೆ ಸುವ್ಯವಸ್ಥೆಗೊಳಿಸುವ ಸಂಕಲ್ಪ ತೊಟ್ಟಿದ್ದು, ಸರ್ಕಾರಿ ವೈದ್ಯರು ಖಾಸಗಿ ಸೇವೆ ನಿಲ್ಲಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕ ಸೇವೆ ಸಲ್ಲಿಸಬೇಕು.
ಆಗಲ್ಲ ಎನ್ನುವವರು ಕೆಲಸ ಬಿಟ್ಟು ಹೋಗಲಿ. ಸಾಕಷ್ಟು ಯುವಕರು ಓದಿ ಕುಳಿತಿದ್ದಾರೆ. ಅವರನ್ನು ನೇಮಿಸಲಾಗುವುದು ಎಂದು ಇದೇ ವೇಳೆ ಆಸ್ಪತ್ರೆ ವೈದ್ಯ ಸಿಬ್ಬಂದಿಗಳಿಗೆ ಅವರು ಎಚ್ವರಿಕೆ ನೀಡಿದ್ದಾರೆ.