ಪ್ರಮುಖ ಸುದ್ದಿ
ಕೃಷ್ಣಾ ಮಠದ ಆನೆ ಏಕಾಏಕಿ ರವಾನೆ ಯಾಕೆ.? ಎಲ್ಲಿಗೆ.?
ಸುಭದ್ರ ಹೊನ್ನಾಳಿ ಮಠಕ್ಕೆ ರವಾನೆ ಯಾಕೆ ಗೊತ್ತಾ.?
ಉಡುಪಿಃ ಇಲ್ಲಿನ ಕೃಷ್ಣಾಮಠದಲ್ಲಿ ಕಳೆದ 25 ವರ್ಷ ದಿಂದ ವಾಸವಿದ್ದ ಸುಭದ್ರೆಯನ್ನು ಏಕಾಏಕಿ ಅದು ಸುಮಾರು ರಾತ್ರಿ 3-30 ಗಂಟೆಗೆ ಬೇರಡೆ ಕಳುಹಿಸಿದ ಮಠದ ಆಡಳಿತ ಮಂಡಳಿ ನಡೆಯನ್ನು ಕಂಡು ಜನರು ಮಾತಾಡಿಕೊಳ್ಳುವಂತಾಗಿದೆ.
25 ವರ್ಷ ಶ್ರೀಮಠದಲ್ಲಿದ್ದ ಸುಭದ್ರಾಳನ್ನು ಹೊರ ನೂಕಿದರೇಕೆ ಎಂಬ ಗುಸಗುಸು ಸುದ್ದಿ ಎಲ್ಲಡೆ ವ್ಯಾಪಿಸಿದೆ.
ಅರೆರರೆ..ಸುಭದ್ರೆ ಅಂದರೆ ಬೇರಾವ ಮಹಿಳೆ ಅಲ್ಲ ಶ್ರೀಮಠದಲ್ಲಿ ಸಾಕಿರುವ ಆನೆ ಅದರ ಹೆಸರು ಸುಭದ್ರೆ.
ಈ ಆನೆಯನ್ನು ರಾತ್ರೋರಾತ್ರಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮಠಕ್ಕೆ ರವಾನಿಸಲಾಗಿದೆ ಎಂದು ತಿಳಿಸಿದ ಮಠದ ಸಿಬ್ಬಂದಿ, ಸಂತಾನಾಭಿವೃದ್ಧಿ ಗಾಗಿ ಆನೆಯನ್ನು ಹೊನ್ನಾಳಿಮಠಕ್ಕೆ ಬಿಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಅಲ್ಲದೆ ಸುಭದ್ರೆಗೆ ಈ ನಡುವೆ ಡಯಾಬಿಟಿಸ್ ನಿಂದ ಬಳಲುತ್ತಿದ್ದು ಆಕೆಯನ್ನು ಈ ಹಿಂದೆ ಸಕ್ರೆಬೈಲು ಕ್ಯಾಂಪ್ ನಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ಸಹ ಅವರು ತಿಳಿಸಿದ್ದಾರೆ.