ಪ್ರಮುಖ ಸುದ್ದಿ
ಶರತ್ ಬಚ್ಚೆಗೌಡರನ್ನು ಭೇಟಿ ಮಾಡಲ್ಲ-ಎಂಟಿಬಿ
ಚುನಾವಣೆ ಎದುರಿಸಲು ನಾನು ಸಿದ್ಧ-ಎಂಟಿಬಿ
ಬೆಂಗಳೂರಃ ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನನಗೆ ಜನರ ನಾಡಿ ಮಿಡಿತ ಗೊತ್ತು. ನಾನು ಜನ ಸೇವೆಗಾಗಿಯೇ ರಾಜಕೀಯಕ್ಕೆ ಬಂದವನು. ನಾನು ಚುನವಾಣೆ ಎದುರಿಸಲು ಸಿದ್ಧವಿದ್ದೇನೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ ಹೇಳಿಕೆ ನೀಡಿದ್ದಾರೆ.
ಸಿಎಂ ನಿವಾಸದಲ್ಲಿ ಯಡಿಯೂರಪ್ಪನವರನ್ನು ಭೇಟಿಯಾಗಿ ಹೊರ ಬಂದ ಅವರು ಸುದ್ದಿಗಾರರೊಂದಿಗೆ ಈ ವಿಷಯ ಹಂಚಿಕೊಂಡಿದ್ದು, ಶರತ್ ಬಚ್ಚೆಗೌಡ ಚುನಾವಣೆಗೆ ನಿಂತರೂ ನನಗೇನು ಅಭ್ಯಂತರವಿಲ್ಲ. ಪಕ್ಷೇತರವಾಗಿಯಾದರೂ ನಿಲ್ಲಲಿ ಯಾವ ಪಕ್ಷದಿಂದಾರೂ ನಿಲ್ಲಲಿ. ನಾನು ಬಚ್ಚೇಗೌಡರನ್ನು ಭೇಟಿ ಮಾಡಲ್ಲ ಎಂದು ಅವರು ತಿಳಿಸಿದ್ದಾರೆ.
ಮಧ್ಯಂತರ ಚುನಾವಣೆ ಬರಲಿದೆ ಎಂಬ ಹಿನ್ನೆಲೆಯಲ್ಲಿ ಅನರ್ಹಗೊಂಡ ಎಂಟಿಬಿ ನಾಗರಾಜ ಬಿಜೆಪಿ ಟಿಕೇಟ್ ನಿಂದ ಸ್ಪರ್ಧಿಸಲು ತಯ್ಯಾರಿ ನಡೆಸುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಶರತ್ ಬಚ್ಚೆಗೌಡರು ಹಠ ಹಿಡಿದಿದ್ದು, ಇಬ್ಬರ ಮಧ್ಯೆ ಬಿಜೆಪಿ ಟಿಕೇಟ್ ಗಾಗಿ ಪೈಪೋಟಿ ನಡೆಯುತ್ತಿದೆ ಎನ್ನಲಾಗಿದೆ.