ಪ್ರಮುಖ ಸುದ್ದಿ
ಐಟಿ ಭಯೋತ್ಪಾದನೆಗೆ ಇನ್ನೆಷ್ಟು ಬಲಿ.? -ಸಿದ್ರಾಮಯ್ಯ ಪ್ರಶ್ನೆ
ವಿವಿ ಡೆಸ್ಕ್ಃ ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಅವರು ಐಟಿ ಅಧಿಕಾರಿಗಳ ಕಿರುಕುಳ ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ರಾಮಯ್ಯ ಟ್ವಿಟ್ ಮೂಲಕ ತಿಳಿಸಿದ್ದಾರೆ.
ಕಳೆದ ೆರಡು ಮೂರು ದಿನಗಳಿಂದ ಐಟಿ ಅಧಿಕಾರಿಗಳು ನಡೆಸುತ್ತಿರುವ ವಿಚಾರಣೆ ವೇಳೆ ಸಾಕಷ್ಟು ಕಿರುಕುಳ ನೀಡಿರುವ ಹಿನ್ನೆಲೆ ರಮೇಶ ಬೇಸರಗೊಂಡಿದ್ದ ಎನ್ನಲಾಗಿದೆ. ಆದರೆ ಕೇಂದ್ರದ ಕೃಪಾಪೋಷಿತ ಐಟಿ ಭಯೋತ್ಪಾದನೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಐಟಿಗೆ ಇನ್ನೆಷ್ಟು ಬಲಿಯಾಗಬೇಕೆಂದು ಅವರ ಪ್ರಶ್ನೆ ಮಾಡಿದ್ದಾರೆ.