ಪ್ರಮುಖ ಸುದ್ದಿ
50 ಲಕ್ಷಕ್ಕೂ ಹೆಚ್ಚು ಜನರಿಗೆ ಆಸರೆಯಾದ ಆಯುಷ್ಮಾನ್.!
ಆಯುಷ್ಮಾನ್ ಭಾರತ ಒಂದು ಮೈಲಿಗಲ್ಲು-ಪ್ರಧಾನಿ ಮೋದಿ
ವಿವಿ ಡೆಸ್ಕ್ಃ ಆರೋಗ್ಯಕರ ಭಾರತವನ್ನು ರಚಿಸುವ ಪ್ರಯಾಣದಲ್ಲಿ ಆಯುಷ್ಮಾನ ಭಾರತ ಯೋಜನೆ ಒಂದು ಮೈಲಿಗಲ್ಲು. ಈ ಯೋಜನೆ ಕೇವಲ ಒಂದೇ ವರ್ಷದಲ್ಲಿ 50 ಲಕ್ಷ ಜನರಿಗೆ ಉಚಿತ ಚಿಕಿತ್ಸೆ ಪಡೆಯಲು ಸಹಕಾರಿಯಾಗಿದೆ. ಆರೋಗ್ಯಕರ ಭಾರತ ನಿರ್ಮಾಣಕ್ಕೆ ಯೋಜನೆ ಸಹಕಾರಿಯಾಗಿದೆ.
ಈ ಹಿನ್ನೆಲೆಯಲ್ಲಿ ಇದೊಂದು ಪ್ರಮುಖ ಮೈಲಿಗಲ್ಲು! ಎಂದು ಪ್ರಧಾನಿ ಮೋದಿಯವರು ಟ್ವಿಟ್ ಮಾಡಿದ್ದಾರೆ. 50 ಲಕ್ಷಕ್ಕೂ ಹೆಚ್ಚು ನಾಗರಿಕರು ಈಗಾಗಲೇ ಈ ಯೋಜನೆ ಸೌಲಭ್ಯ ಪಡೆದಿರುವದು, ಆಯುಷ್ಮಾನ ಭಾರತ ಚಿಕಿತ್ಸೆ ನೀಡುತ್ತಿರುವದು ಪ್ರತಿಯೊಬ್ಬರ ಭಾರತೀಯನಿಗೆ ಹೆಮ್ಮೆ ತರುವಂತ ವಿಷಯವಾಗಿದೆ. ಈ ಯೋಜನೆಯು ಹಲವಾರು ಭಾರತೀಯರಿಗೆ ಅಧಿಕಾರ ನೀಡುತ್ತಿದೆ ಎಂದು ಮೋದಿಯವರು ಟ್ವಿಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.