ಪ್ರಮುಖ ಸುದ್ದಿ
ವಿಪಕ್ಷ ತನ್ನಿಂದತಾನೆ ಸ್ವರೂಪ ಕಳೆದುಕೊಂಡಿದೆ-ಕೋರೆ
ದೇಶದೆಲ್ಲೆಡೆ ಚುನಾವಣೆ ನಡೆದರೂ ಬಿಜೆಪಿಯೇ ಗೆಲ್ಲಲಿದೆ-ಕೋರೆ
ಬೆಳಗಾವಿಃ ಉಪ ಚುನಾವಣೆಯಲ್ಲಿ ಬೆಳಗಾವಿಯ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಅಥಣಿ ಕ್ಷೇತ್ರಕ್ಕೆ ಪುನಃ ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ಟಿಕೇಟ್ ನೀಡಲಿದ್ದಾರೆ ಎಂಬುದು ಸುಳ್ಳು. ಅನರ್ಹ ಶಾಸಕ ಕುಮಟಳ್ಳಿ ಅವರಿಗೆ ಬಿಜೆಪಿ ಟಿಕೇಟ್ ನೀಡಲಿದೆ ಎಂದು ಬಿಜೆಪಿ ರಾಜ್ಯ ಸಭೆಸದಸ್ಯ ಪ್ರಭಾಕರ ಕೋರೆ ಹೇಳಿದರು.
ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಉಮೇಶ ಕತ್ತಿ ಅವರು ಬಿಜೆಪಿಯ ಹಿರಿಯ ನಾಯಕರು, ಅವರು ಬಿಜೆಪಿ ತೊರೆಯುವದಿಲ್ಲ. ಮುಂದೆ ಅವರಿಗೆ ಹಿರಿತನದ ಮೇಲೆ ಸಿಎಂ ಸ್ಥಾನ ದೊರೆತರು ದೊರೆಯಬಹುದು ಎಂದು ಕೋರೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ವಿಪಕ್ಷ ತನ್ನಿಂದಾತಾನೆ ಸ್ವರೂಪ ಕಳೆದುಕೊಂಡಿದೆ ಎಂದು ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವದು ಕನಸಿನ ಮಾತು. ಈಗ ದೇಶದ ಎಲ್ಲೆಡೆ ಚುನಾವಣೆ ನಡೆದರೂ ಬಿಜೆಪಿಯೇ ಗೆಲ್ಲಲಿದೆ ಎಂದರು.