ಪ್ರಮುಖ ಸುದ್ದಿ
ಮುಂದಿನ ಮುಖ್ಯಮಂತ್ರಿ ಉಮೇಶ ಕತ್ತಿನಾ.?
ಉಮೇಶ ಕತ್ತಿಗೆ ಡಿಸೆಂಬರನಲ್ಲಿ ದೊಡ್ಡ ಸ್ಥಾನಮಾನ-BSY
ಬೆಳಗಾವಿಃ ಉಮೇಶ್ ಕತ್ತಿಗೆ ಡಿಸೆಂಬರ್ ನಲ್ಲಿ ಒಳ್ಳೆಯ ಸ್ಥಾನ ಮಾನಕೊಡಲಾಗುತ್ತಿದೆ ಎಂದು ಸಿಎಂ ಯಡಿಯೂರಪ್ಪನವರು ಈಗಾಗಲೇ ತಿಳಿಸಿದ್ದಾರೆ. ಆದರೆ ಇದೇ ವೇಳೆಗೆ ಪ್ರಭಾಕರ ಕೋರೆ ಅವರು ಕತ್ತಿಯವರು ಬಿಜೆಪಿಯ ಹಿರಿಯ ನಾಯಕರು ಅವಿರಿಗೆ ಮುಂದಿನ ದಿನಮಾನಗಳಲ್ಲಿ ಸಿಎಂ ಪಟ್ಟ ಒಲಿದು ಬಂದರೂ ಅಚ್ಚರಿ ಪಡುವಂತಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಉಮೇಶ ಕತ್ತಿಯವರ ಹೇಳಿಕೆ ಪ್ರಕಾರ ಮುಂದೆ ಸಚಿವ ಸ್ಥಾನ ದೊರೆಯಲಿದೆ. 17 ಸಚಿವ ಸ್ಥಾನ ಖಾಲಿ ಇವೆ. ಉಪ ಚುನಾವಣೆ ಮುಗಿದ ಬಳಿಕೆ ಸಚಿವ ಸ್ಥಾನ ದೊರೆಯಲಿದೆ ಎಂಬುದನ್ನು ತಿಳಿಸಿದರು. ಆದರೆ ಡಿಸಿಎಂ ಸವದಿ ಹೇಳಿಕೆ ಪ್ರಕಾರ ಕತ್ತಿಯವರಿಗೆ ಉಪ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ ಎಂದು ಹೇಳಲಾಗುತ್ತಿದೆ.
ಆದರೆ ಕತ್ತಿಯವರು ಹಣೆಬರಹವಿದ್ದರೆ ಎಲ್ಲವೂ ದೊರೆಯುತ್ತದೆ. ಸವದಿ ನನ್ನ ಮಿತ್ರ ಅವರಿಗೆ ಡಿಸಿಎಂ ಸ್ಥಾನ ದೊರೆತಿರುವದು ಸಂತಸ ತಂದಿದೆ ಎಂದು ಹೇಳುವ ಮೂಲಕ ಸವದಿಯವರ ಕಾಲಳೆದಿದ್ದಾರೆ.