ಅ.17 ರಂದು ಮಾರುತಿ ಪ್ರತಿಮೆ ಮೆರವಣಿಗೆ, 18 ರಂದು ಮೂರ್ತಿ ಪ್ರತಿಷ್ಠಾಪನೆ
ಅ.18 ರಂದು ಮಾರುತಿ ಮೂರ್ತಿ ಪ್ರತಿಷ್ಠಾಪನೆ, ಉದ್ಘಾಟನೆ ಸಮಾರಂಭ
ಯಾದಗಿರಿ, ಶಹಾಪುರಃ ಪಟ್ಟಣದ ಜೀವೇಶ್ವರ ನಗರದ ಅರಳಿಕಟ್ಟೆಯಲ್ಲಿ ನೂತನ ಮಾರುತಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಉದ್ಘಾಟನೆ ಸಮಾರಂಭ ಇದೇ ಅಕ್ಟೋಬರ್ 18 ಶುಕ್ರವಾರ ಜರುಗಲಿದೆ. ಮತ್ತು ಮುಂಚಿತವಾಗಿ ಅ.17 ರಂದು ಮಾರುತಿ ದೇವರ ನೂತನ ಪ್ರತಿಮೆ ಮೆರವಣಿಗೆ ಬೆಳಗ್ಗೆ 9 ಗಂಟೆ ಮದ್ಯಾಹ್ನ 1 ರವರೆಗೆ ನಡೆಯಲಿದೆ ಕಾರಣ ಸಕಲ ಬಂಧುಗಳು ಭಾಗವಹಿಸಬೇಕೆಂದು ಸ್ವಕುಳ ಸಾಳಿ ಸಮಾಜ ಪ್ರಕಟಣೆಯಲ್ಲಿ ತಿಳಿಸಿದೆ.
ಅ.18 ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಸ್ಥಳೀಯ ಫಕೀರೇಶ್ವರ ಮಠದ ಗುರುಪಾದ ಮಹಾಸ್ವಾಮೀಜಿವಹಿಸಲಿದ್ದಾರೆ. ಉದ್ಘಾಟಕರಾಗಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮತ್ತು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಅವರು ಆಗಮಿಸಲಿದ್ದಾರೆ. ಸ್ವಕುಳ ಸಾಳಿ ಸಮಾಜದ ರಾಜ್ಯಧ್ಯಕ್ಷ ಚಂದ್ರಕಾಂತ ಭಂಡಾರೆ ನೇತೃತ್ವವಹಿಸಲಿದ್ದಾರೆ.
ತಾಲೂಕು ಸ್ವಕುಳ ಸಾಳಿ ಸಮಾಜದ ಅಧ್ಯಕ್ಷ ರಾಜಕುಮಾರ ಚಿಲ್ಲಾಳ ಅಧ್ಯಕ್ಷತೆವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಕಲಬುರ್ಗಿ ಜಿಲ್ಲಾ ಸ್ವಕುಳ ಸಾಳಿ ಸಮಾಜ ಅಧ್ಯಕ್ಷ ನಾರಾಯಣ ಸಿಂಗಾಡೆ ಸೇರದಂತೆ ಶಹಾಪುರ ತಾಲೂಕು ಸ್ವಕುಳ ಸಾಳಿ ಸಮಾಜದ ಮಹಿಳಾ ಅಧ್ಯಕ್ಷೆ ಮಂಜುಳಾ ಕೆಂದೋಳೆ ಸೇರಿದಂತೆ ಹಿರಿಯರು ಉಪಸ್ಥಿತರಿರಲಿದ್ದಾರೆ. ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಆಯೋಜಕರು ಕೋರಿದ್ದಾರೆ.