H ವಿಶ್ವನಾಥ-ಸಾ.ರಾ.ಮಹೇಶ ಚಾಮುಂಡಿ ಬೆಟ್ಟದಲ್ಲಿ ಹೈಡ್ರಾಮ
ಮೈಸೂರಃ ಎಚ್.ವಿಶ್ವನಾಥ ಮತ್ತು ಸಾ.ರಾ.ಮಹೇಶ ಇಬ್ಬರು ನಾಯಕ ಇಂದು ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಬಂದರೂ ಇಬ್ಬರು ನಾಯಕರು ಆಣೆ ಪ್ರಮಾಣ ಮಾಡಲು ಮುಂದಾಗದೆ ಕಾಗೆ ಹಾರಿಸುವ ಮೂಲಕ ಹೈಡ್ರಾಮ ನಡೆಸಿದ್ದು, ಹಾಗೇ ವಾಪಸ್ ತೆರಳಿದ ಘಟನೆ ನಡೆದಿದೆ.
ಬೆಳಗ್ಗೆ ಮೊದಲಿಗೆ ಚಾಮುಂಡಿ ಬೆಟ್ಟಕ್ಕೆ ಬಂದ ಎಚ್.ವಿಶ್ವನಾಥ ಸಾ.ರಾ.ಮಹೇಶ ನನ್ನನ್ನು ಮಾರಿಕೊಂಡಿದ್ದೇನೆ ಎಂದು ಮಾರಾಟವಾಗಿದ್ದೇನೆ ಯಾರೋ ಕೊಂಡುಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ, ಎಲ್ಲಿದ್ದೀಯಾ ಮಹೇಶ ಬಾ ಎದುರುಗಡೆ ನನ್ನ ಚಾಮುಂಡಿ ಸನ್ನಿಧಿಯಲ್ಲಿ ಒಳಗಡೆ ಇದ್ದೇನೆ. ಯಾರು ನನ್ನನ್ನು ಕೊಂಡುಕೊಂಡಿದ್ದಾರೆ ಅವರನ್ನು ಕರೆದುಕೊಂಡು ಬಾ ಪ್ರಮಾಣ ಮಾಡೋಣ. ನಿನ್ಯಾಕೆ ಕಾರೊಳಗಡೆ ಕುಳಿತಿದ್ದೀಯಾ ಹೇಡಿ, ಬಾ ಹೊರಗಡೆ ಎಂದು ವಿಶ್ವನಾಥ ಖಾರವಾಗಿ ಪ್ರಶ್ನಿಸಿದರು.
ಅಲ್ಲದೆ ಮಹೇಶ ಪಲಾಯನ ವಾದ ಮಾಡಿದ್ದಾರೆ. ಅವರು ಮಾಡುವ ವಾದ ಸತ್ಯವಾಗಿರಲಿ, ಬರಿ ಹಿಟ್ ಆಂಡ್ ರನ್ ಮಾಡಬೇಡಿ ಎಂದು ವಾಗ್ದಾಳಿ ನಡೆಸಿದರು.
ಎಚ್.ವಿಶ್ವನಾಥ ಮುಖ ನೋಡಲು ಇಷ್ಟವಿಲ್ಲ-ಸಾ.ರಾ.ಮಹೇಶ
ವಿಶ್ವನಾಥ ಹಿರಿಯರು ನನ್ನ ವಿರುದ್ಧ ವಯಕ್ತಿಕ ಆರೋಪ ಮಾಡಿದ್ದಾರೆ. ಆಣೆ ಪ್ರಮಾಣ ಮಾಡಲು ನಾನು ಸಿದ್ಧವಾಗಿದ್ದೇನೆ ಎಂದು ಚಾಮುಂಡಿ ದೇವಿ ಸನ್ನಿಧಾನದ ಹೊರಗಡೆ ನಿಂತ ಸಾ.ರಾ.ಮಹೇಶ ವಿಶ್ವನಾಥ ಅವರ ಮುಖ ನೋಡಲು ಇಷ್ಟವಿಲ್ಲ. ನಾನು ಈಗಾಗಲೇ ಹೇಳೀದಂತೆ ಆಣೆ ಮಾಡಿದ್ದೇನೆ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಆದರೆ ಮಾದ್ಯಮದೆದುರು ಯಾವುದೇ ಆಣೆ ಪ್ರಮಾಣ ಈ ಇಬ್ಬರು ನಾಯಕರು ಮಾಡದೆ ಬರಿ ಹೈಡ್ರಾಮ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.