ಪ್ರಮುಖ ಸುದ್ದಿ
ಕಾವೇರಿ ಮುಖ್ಯಸ್ಥರ ಕಟ್ಟಡ ನಿರ್ಮಾಣಕ್ಕೆ 1 ಕೋಟಿ – ಮೇಯರ್ ಗೌತಮ್
ಕಾವೇರಿ ಉಗಮ ಸ್ಥಳ ತೀರ್ಥೋದ್ಭವ ದರ್ಶನ ಪಡೆದ ಭಕ್ತಕೋಟಿ
ಕೊಡಗುಃ ಇಂದು ಶುಭ ಶುಕ್ರವಾರ ಕಾರಣ ಕಾವೇರಿ ಉಗಮ ಸ್ಥಾನದಲ್ಲಿ ತೀರ್ಥೋದ್ಭವವಾದ ಪುಣ್ಯ ಕ್ಷಣ. ಈ ಬಾರಿ ಎರಡು ನಿಮಿಷ ಮುಂಚಿತವಾಗಿಯೇ ಕಾವೇರಿ ತಾಯಿ ದರ್ಶನ ನೀಡಿದ್ದಾಳೆ. ಈ ಸಂದರ್ಭ ಸಚಿವರಾದ ಆರ್.ಅಶೋಕ, ಸೋಮಣ್ಣ ಸೇರಿದಂತೆ ಮೇಯರ್ ಗೌತಮ್ ಇತರೆ ಗಣ್ಯರು ಸಹಸ್ರಾರು ಸಂಖ್ಯೆಯಲ್ಲಿದ್ದ ಭಕ್ತರು ಕಾವೇರಿ ಉಗಮ ಸ್ಥಳದಲ್ಲಿ ತೀರ್ಥೋದ್ಭವ ಕಂಡು ಪುಳಕಿತಗೊಂಡರು.
ಈ ಸಂದರ್ಭದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಬೆಂಗಳೂರ ಬಿಬಿಎಂಪಿ ಮೇಯರ್ ಗೌತಮ್, ಬೆಂಗಳೂರಿನ ಜನ ಉಸಿರಾಡುತ್ತಿರುವದು ಇಲ್ಲಿಂದಲೇ ಹೀಗಾಗಿ ತಲಕಾವೇರಿಯಲ್ಲಿ ಕಾವೇರಿ ಮುಖ್ಯಸ್ಥರ ಕಟ್ಟಡ ನಿರ್ಮಾಣಕ್ಕೆ 1 ಕೋಟಿ ಅನುದಾನ ಬಿಬಿಎಂಪಿಯಿಂದ ನೀಡುವುದಾಗಿ ಅವರು ತಿಳಿಸಿದರು.
ನೂರಾರು ವರ್ಷದಿಂದ ಕಾವೇರಿ ತೀರ್ತೋದ್ಭವ ಪ್ರಕ್ರಿಯೆ ನಡೆಯುತ್ತಿದೆ. ಇದೊಂದು ಪುಣ್ಯ ಕಾರ್ಯ ಎಂದು ತಿಳಿಸಿದ್ದಾರೆ.