ಪ್ರಮುಖ ಸುದ್ದಿ
ಕಳ್ಳನ ಮನಸ್ಸು ಉಳ್ಳುಳ್ಳುಗೆ-ಈಶ್ವರಪ್ಪ ಅಂದಿದ್ಯಾರಿಗೆ.?
ಹಾಸನಃ ಕಳ್ಳನ ಮನಸ್ಸು ಉಳ್ಳುಳ್ಳುಗೆ ಎಂಬಂತಿದೆ ಕೆಪಿಸಿಸಿ ಅಧ್ಯಕ್ಷ ಗೂಂಡುರಾವ್ ಅವರು ನೀಡಿದ ಹೇಳಿಕೆ ಎಂದು ಗ್ರಾಮೀಣಾ ಭಿವೃದ್ಧಿ ಸಚಿವ ಈಶ್ವರಪ್ಪ ಅವರು ಛೇಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಐಟಿ, ಇಡಿ ಸಂಸ್ಥೆಗಳ ದುರ್ಬಳಕೆ ಆಗುತ್ತಿದೆ. ಕೇಂದ್ರ ಸರ್ಕಾರ, ಬಿಜೆಪಿಯವರು ಈ ಸಂಸ್ಥೆಗಳಿಂದ ಕಾಂಗ್ರೆಸ್ ನಾಯಕರ ವಿರುದ್ಧ ರೇಡ್ ಮಾಡಿಸುತ್ತಿದ್ದಾರೆ ಎಂಬ ಆರೋಪ ಪದೆ ಪದೇ ಹೇಳಿಕೆ ನೀಡುವದು, ಸತ್ಯಹರಿಶ್ಚಂದ್ರಂತೆ ಅವರು ಮಾತನಾಡುವದು ನೋಡಿದರೆ ಕಳ್ಳನ ಮನಸ್ಸು ಉಳ್ಳುಳ್ಳಗೆ ಎಂದಂತೆ ಭಾಸವಾಗ್ತಿದೆ.
ಐಟಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಅಧಿಕಾರಿಗಳ ಕೈಗೆ ದೊರೆತಿರುವ ಕೋಟ್ಯಂತರ ರೂಪಾಯಿ ನಗದು, ಇತರೆ ದಾಖಲೆಗಳು ಸುಳ್ಳು ಹೇಳುತ್ತವೆಯೇ.? ಅಧಿಕಾರಿಗಳು ಸುಳ್ಳು ಮಾಹಿತಿ ಕೋರ್ಟಿಗೆ ಸಲ್ಲಿಸಲು ಸಾಧ್ಯವೇ..ಎಂದು ಅವರು ಪ್ರಶ್ನಿಸಿದ್ದಾರೆ.