ಪ್ರಮುಖ ಸುದ್ದಿ

ಶರಣಗೌಡ ಕಂದಕೂರ ಪ್ರತಿಭಟನೆಗೆ ತಟ್ಟಿದ 144 ಬಿಸಿ

ಯಾದಗಿರಿಃ ಗುರಮಠಕಲ್ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರಿಗೆ ಇಲ್ಲಿನ ನಗರ ಠಾಣೆ ಪಿಎಸ್ಐ ಬಾಪುಗೌಡ ಎಂಬುವರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಕೂಡಲೇ ಆ ಪಿಎಸ್ಐ ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ನಗರದ ಗಾಂಧೀ ವೃತ್ತದ ಬಳಿ ಠಾಣೆ ಎದುರು ಸೋಮವಾರ ಬೆಳಗ್ಗೆಯಿಂದ ಪ್ರತಿಭಟನೆ ನಡೆಸುತ್ತಿದ್ದರು.

ಘಟನಾ ಸ್ಥಳಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಆಗಮಿಸಿ ಬೆಂಬಲ ವ್ಯಕ್ತಪಡಿಸುತ್ತಿದ್ದು, ಸೋಮವಾರ ಸಂಜೆ ಪಿಎಸ್ಐ ಅಮಾನತುಗೊಳಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭರವಸೆ ನೀಡಿದ್ದರು. ಆದರೆ ಇದುವರೆಗೂ ಅಮಾನತುಗೊಳಿಸಿರುವದಿಲ್ಲ. ಾದರೆ ತಡ ರಾತ್ರಿ ಪಿಎಸ್ಐ ಅಮಾನತುಗೊಳಿಸಲು ಆಗುವದಿಲ್ಲ ಪೊಲೀಸ್ ಇಲಾಖೆ ಸ್ಪಷ್ಟ ಪಡಿಸಿದ್ದು, ಅಲ್ಲದೆ ಮಂಗಳವಾರ  ರಾತ್ರಿ ಸೆಕ್ಷನ್ 144 ಜಾರಿಗೊಳಿಸಿದೆ. ಪ್ರತಿಭಟನೆಯಲ್ಲಿ 144 ಜಾರಿ ಆದೇಶ ಮಾಡಿರುವ ಹಿನ್ನೆಲೆ ನಾಲ್ಕು ಜನಕ್ಕಿಂತ ಹೆಚ್ಚು ಜನರು ಭಾಗವಹಿಸುವಂತಿಲ್ಲ. ಹೀಗಾಗಿ ಪೊಲೀಸರು ಅಪಾರ ಸಂಖ್ಯೆಯ ಕಾರ್ಯಕರ್ತರನ್ನು ಸ್ಥಳದಿಂದ ಜಾಗ ಖಾಳಿ ಮಾಡಿಸಿದ ಘಟನೆ ನಡೆದಿದೆ.

ಹೀಗಾಗಿ ಪ್ರತಿಭಟನಾ ಸ್ಥಳದಿಂದ  ಜೆಡಿಎಸ್ ಕಾರ್ಯಕರ್ತರು ಚದುರಿದ್ದಾರೆ. ಪ್ರಸ್ತುತ ಶರಣಗೌಡ ಕಂದಕೂರ ಸೇರಿದಂತೆ ನಾಲ್ಕು ಜನ ಮಾತ್ರ ಪ್ರತಿಭಟನೆ ಸ್ಥಳದಲ್ಲಿದ್ದು, ಧರಣಿ ಮುಂದುವರೆಸಿದ್ದಾರೆ. 144 ಸೆಕ್ಷನ್ ನಾಳೆ ಅಂದರೆ ಬುಧವಾರ ರಾತ್ರಿ 9 ಗಂಟೆವರೆಗೂ ಜಾರಿಯಲ್ಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಪೊಲೀಸ್ ಜೀಪ್ ಮೂಲಕ ಪ್ರಚಾರ ಪಡಿಸುತ್ತಿರುವದು ಕಂಡು ಬಂದಿತು.

 

Related Articles

Leave a Reply

Your email address will not be published. Required fields are marked *

Back to top button