ಪ್ರಮುಖ ಸುದ್ದಿ
ಪರೋಕ್ಷವಾಗಿ ಸಿದ್ದು ವಿರುದ್ಧ ಟ್ವಿಟ್ ಮಾಡಿದ ಸಿ.ಟಿ.ರವಿ
ಸಿ.ಟಿ.ರವಿ ಮತ್ತು ಸಿದ್ರಾಮಯ್ಯ ಪರಸ್ಪರ ಟ್ವಿಟ್ ಹಾವಳಿ
ವಿವಿ ಡೆಸ್ಕ್ಃ ಕಾಂಗ್ರೆಸ್ ಪಕ್ಷದ ನಾಯಕರುಗಳು ಮಹಾ ಕ್ರೂರಿಗಳ ಇತಿಹಾಸ ಓದಿ ಅವರನ್ನು ವೈಭವೀಕರಿಸುವುದನ್ನು ಬಿಟ್ಟು ವೀರ ಸಾವರ್ಕರ್ ರಂತ ಅಪ್ರತಿಮ ದೇಶಭಕ್ತರ ಬಗ್ಗೆ ಓದಿಕೊಂಡರೆ ಮಹಾ ಸಾಧನೆಗೆ ಯಾರೂ ಸಾಟಿ ಇಲ್ಲ ಎಂಬ ಸತ್ಯದ ಅರಿವಾಗುತ್ತದೆ ಎಂದು ಸಚಿವ ಸಿ.ಟಿ.ರವಿ ಟ್ವಿಟ್ ಮೂಲಕ ಮತ್ತೊಮ್ಮೆ ವಿಪಕ್ಷ ನಾಯಕ ಸಿದ್ರಾಮಯ್ಯನವರಿಗೆ ಪರೋಕ್ಷವಾಗಿ ತಿವಿದಿದ್ದಾರೆ.
ಟ್ವಿಟ್ ನಲ್ಲಿ ಈ ಮೇಲಿನಂತೆ ಬರೆದುಕೊಂಡ ಅವರು, ಈಚೆಗೆ ಸಿದ್ರಾಮಯ್ಯ ರಾಜಕರಣದಲ್ಲಿ ಬಿಡುವು ಸಿಕ್ಕಾಗ ಇತಿಹಾಸ ಓದಿಕೊಂಡು ಮಾತನಾಡುತ್ತೇವೆ. ಕುಡಿದು ವಾಹನ ಓಡಿಸಿ ಮನುಷ್ಯರನ್ನು ಕೊಲ್ಲುವದಿಲ್ಲ ಎಂದು ಸಿ.ಟಿ.ರವಿಯವರನ್ನು ಪರೋಕ್ಷವಾಗಿ ಟೀಕಿಸಿದ್ದರು. ವಿಪಕ್ಷ ನಾಯಕ ಸಿದ್ರಾಮಯ್ಯನವರು ಬಿಟ್ಟರು ಸಚಿವ ರವಿ ಅವರು ಸಿದ್ರಾಮಯ್ಯನವರ ವಿರುದ್ಧ ಒಂದಿಲ್ಲೊಂದು ಟ್ವಿಟ್ ಮಾಡುತ್ತಿರುವದು ಕಂಡು ಬರುತ್ತಿದೆ.