ಪ್ರಮುಖ ಸುದ್ದಿ

ಬಿಜೆಪಿ ಶಕ್ತಿ ಕೇಂದ್ರ ಹುಬ್ಬಳ್ಳಿಯಲ್ಲಿ ಎಣೆಯುವ ತಂತ್ರ ಫಲಿಸಲಿದೆಯೇ.?

ಹುಬ್ಬಳ್ಳಿಃ ಬಿಜೆಪಿ ಮತ್ತು ಸಂಘ ಪರಿವಾರದ ಶಕ್ತಿಕೇಂದ್ರವಾದ ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನರು ಇಂದು ಅನರ್ಹರಿಗೆ ಟಿಕೆಟ್ ನೀರುವ ಕುರಿತು ಸೇರಿದಂತೆ ಅದರಿಂದುಂಟಾಗುವ ಪರಿಣಾಮಗಳ ಬಗ್ಗೆ, ಉದ್ಭವಿಸುವ ಭಿನ್ನಮತ ಶಮನಗೊಳಿಸುವದ ಹೇಗೆ ಎಂಬುದರ ಸಮಗ್ರ ಚರ್ಚೆ ನಡೆಸುವಲ್ಲಿ ಇಂದು ರಾಜ್ಯ ಬಿಜೆಪಿ ಘಟಕ ಸಭೆ ಕರೆದಿದೆ.

ಸಭೆಯಲ್ಲಿ ಹಲುವ ಪ್ರಮುಖ ಅಂಶಗಳ ಕುರಿತು ನಿರ್ಧಾರಕೈಗೊಳ್ಳಬೇಕಾಗುತ್ತದೆ. ಬಿಜೆಪಿ ಉಪ ಚುನಾವಣೆಯಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಉತ್ತರ ಕರ್ನಾಟಕ ಭಾಗದ 8 ಕ್ಷೇತ್ರಗಳ ಮೇಲೆ ಕಣ್ಣೂರಿದ ಬಿಜೆಪಿ. ಯಾರ್ಯಾರಿಗೆ ಟಿಕೆಟ್ ನೀಡಬೇಕೆಂಬದರ ಕುರಿತು ಅಗಾಧ ಚರ್ಚೆ ಮಾಹಿತಿಯು ಪಡೆಯುವ ಕೆಲಸ ಮಾಡಲಿದೆ.

ಬಿಜೆಪಿ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆಯಾಗಿರುವದರಿಂದ ಗೆಲುವಿನ ತಂತ್ರ ರೂಪಿಸಿ,  ಉಪಚುನಾವಣೆಯಲ್ಲಿ ಗೆಲುವು ಸಾಧಿಸಲು ಪೂರಕವಾಗಲಿದೆ ಎಂದು ಬಿಜೆಪಿ ಹೇಳುತ್ತಿದೆ. ಈಗಾಗಲೇ ಬಿಜೆಪಿ ರಾಜ್ಯಧ್ಯಕ್ಷ  ನಳೀನಕುಮಾರ ಕಟೀಲು, ಸಿಎಂ ಯಡಿಯೂರಪ್ಪ, ಗೋವಿಂದ ಕಾರಜೋಳ, ಆರ್.ಅಶೋಕ ಸೇರಿದಂತೆ ಪ್ರಮುಖರು ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button