ಪ್ರಮುಖ ಸುದ್ದಿ
ಬಂಡೆ ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ
ಬೆಂಗಳೂರಃ ಕಾನೂನನ್ನು ನಾನು ಅಗೌರವಿಸಿದ್ದರೆ ದೇವರೇ ನನಗೆ ಶಿಕ್ಷಿಸಲಿ. ಬಂಡೆ ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ ನಾನು ಸುಮ್ಮನೆ ಕೂಡುವವನಲ್ಲ ಎಂದು ಡಿ.ಕೆ.ಶಿವಕುಮಾರ ಸುದ್ದಿಗೋಷ್ಠಿಯಲ್ಲಿ ಗುಡುಗಿದ್ದಾರೆ.
ಸಿಬಿಐ ತನಿಖೆಗೆ ಸಹಕಾರ ನೀಡುವೆ. ನನ್ನ ಮಾತಿಗೆ ನಾನು ಬದ್ಧ. ಆತ್ಮಸಾಕ್ಷಿಗೆ ವಿರುದ್ಧ ಕೆಲಸ ಮಾಡಲ್ಲ. ನನಗೆ ಮೋಸದ ಬದುಕು ಬೇಕಿಲ್ಲ, ಜೈಲಲ್ಲಿ ಎಲ್ಲಾ ಕಾನೂನು ಪುಸ್ತಕ ಓದಿಕೊಂಡಿದ್ದೇನೆ. ನಾನೇನು ತಪ್ಪು ಮಾಡಿಲ್ಲ. ಜನರ ನಂಬಿಕೆಗೆ ಮೋಸವೆಗಿಲ್ಲ. ನಾನು ತಪ್ಪು ಮಾಡಿದ್ದರೆ ಕಾನೂನು ನನ್ನ ಶಿಕ್ಷಿಸಲಿ ಎಂದು ತಿಳಿಸಿದರು.
ಜೈಲಿಂದ ಬಂದ ಡಿಕೆಗೆ ಅದ್ದೂರಿ ಸ್ವಾಗತ. ಸೇಬು, ಹೂವಿನ ಸುರಮಳೆ, ಅಭಿಮಾನಿಗಳ ಸಂತಸಕ್ಕೆ ಪಾರವೇ ಇರಲಿಲ್ಲ. ಕೆಪಿಸಿಸಿ ಕಚೇರಿ ಉದ್ದಕ್ಕೂ ಕಾರ್ಯಕರ್ತರ ಪಡೆ ಜೈಕಾರ ಹಾಕುತ್ತಾ ಅವರನ್ನು ಹೆಗಲ ಮೇಲೂ ಹೊತ್ತುಕೊಂಡು ಸಹ ಕುಣಿದರು. ಅಪಾರ ಸಂಖ್ಯೆಯಲ್ಲಿ ಜನಸ್ತೋಮ ನೆರದಿತ್ತು. ಹೀಗಾಗಿ ಇದು ಡಿಕೆಗೆ ಇನ್ನಷ್ಟು ಬಲ ತಂದು ಕೊಟ್ಟಿದೆ ಎಂಬ ಚರ್ಚೆಗಳು ಶುರುವಾಗಿವೆ.