ಮೆರವಣಿಗೆಯಲ್ಲಿ JDS ಬಾವುಟ ಹಿಡಿದ DK – ಸಿದ್ದು ಅಸಮಾಧಾನ, ಏನ್ ಅಂತಾರೇ ದಿನೇಶ್.?
JDS ಬಾವುಟ ಹಾರಾಟ ಕಾಂಗ್ರೆಸ್ ನಾಯಕರಿಗೆ ತಂದ ಸಂಕಟ
ಬೆಂಗಳೂರಃ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಂಧಿಸಿದಂತೆ ಜೈಲಾ ಸೇರಿದ್ದ ಮಾಜಿ ಸಚಿವ ಡಿ.ಕೆ.ಶಿವಕುಮಾರ ಷರತ್ ಬದ್ಧ ಜಾಮೀನು ಪಡೆದು ಹೊರ ಬರುತ್ತಿದ್ದಂತೆ, ನಗರದಲ್ಲಿ ಆಯೋಜಿಸಿದ್ದ ಅದ್ಧೂರಿ ಸ್ವಾಗತ ಮೆರವಣಿಗೆಯಲ್ಲಿ ಡಿಕೆಶಿ ಕೈಯಲ್ಲಿ ಜೆಡಿಎಸ್ ಬಾವುಟ ಹಿಡಿದಿರುವದು ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ ವಿಡಿಯೋ ಒಂದು ವೈರಲ್ ಆಗಿದೆ. ಶನಿವಾರ ಬೆಂಗಳೂರಿಗೆ ಆಗಮಿಸಿದ್ದ ಡಿಕೆಶಿಯನ್ನು ಅವರ ಅಭಿಮಾನಿಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅದ್ದೂರಿ ಮೆರವಣಿಗೆ ಮೂಲಕ ಕೆಪಿಸಿಸಿ ಕಚೇರಿಗೆ ಮೆರವಣಿಗೆ ಮೂಲಕ ಕರೆ ಬರಮಾಡಿಕೊಂಡಿದ್ದರು.
ಈ ವೇಳೆ ನಡೆದ ರೋಡ್ ಶೋದಲ್ಲಿ ಜೆಡಿಎಸ್ ಕಾರ್ಯಕರ್ತರು ಸಹ ಭಾಗವಹಿಸಿದ್ದರು ಎನ್ನಲಾಗಿದೆ. ಆಗ ಜೆಡಿಎಸ್ ಬಾವುಟವೊಂದು ಡಿಕೆಶಿ ಕೈಗೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಡಿಕೆಶಿ ಜೆಡಿಎಸ್ ಬಾವುಟ ಹಿಡಿದಿರುವದು ಕಾಂಗ್ರೆಸ್ ಪಕ್ಷದ ಪ್ರಮುಖರಿಗೆ ನುಂಗಲಾರದ ತುತ್ತಾಗಿದೆ. ಈ ಸಂಗತಿ ಮುಂದೆ ಎಲ್ಲಿಗೆ ಕರೆದೊಯ್ಯಲಿದೆ ಎಂಬುದು ಕಾದು ನೋಡಬೇಕಿದೆ.
ಕಾಂಗ್ರೆಸ್ ಪಕ್ಷ ಮತ್ತು ನಾಯಕರ ವಿರುದ್ಧ ಮಾತನಾಡಿದ ಹಲವರಿಗೆ ನೊಟೀಸ್ ಜಾರಿಗೊಳಿಸಿ, ಪಕ್ಷದಿಂದ ಗೇಟ್ ಪಾಸ್ ನೀಡಿದ್ದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ದಿನೇಶ ಗುಂಡುರಾವ್ ಈ ಕುರಿತು ಏನ್ ಹೇಳುತ್ತಾರೆ. ಡಿಕೆಶಿ ಪಕ್ಕದಲ್ಲಿಯೇ ಕುಳಿತು ಮಾತನಾಡಿದ ದಿನೇಶ ಜೆಡಿಎಸ್ ಬಾವುಟ ಹಾರಾಡಿರುವ ಕುರಿತು ಯಾವುದೇ ಹೇಳಿಕೆ ನೀಡದೆ ನಿನ್ನೆ ಜಾರಿಕೊಂಡಿದ್ದರು. ಇದೀಗ ರಾಜ್ಯದ್ಯಂತ ವೈರಲ್ ಸುದ್ದಿಯಾದ ಇದಕ್ಕೆ ಏನ್ ಉತ್ತರಿಸುತ್ತಾರೆ ಕಾದು ನೋಡಬೇಕು.
ಜೆಡಿಎಸ್ ಬಾವುಟ ಹಾರಾಟ ಏನ್ ಹೇಳುತ್ತೀರಿ ಕಾಂಗ್ರೆಸ್ ಅಧ್ಯಕ್ಷರೇ.?