ಬಸ್ ನಿಲುಗಡೆಗೆ ವ್ಯವಸ್ಥೆ ನಾಗರಿಕರಲ್ಲಿ ಹರ್ಷ ಹೋರಾಟಕ್ಕೆ ಸಂದ ಜಯ
ಹಳೇ ಬಸ್ ನಿಲ್ದಾಣದೊಳಗೆ ಬಸ್ ನಿಲುಗಡೆ ಆದ್ಯತೆ-ನಾಗರಿಕರಿಗೆ ಸಂದ ಜಯ
ಯಾದಗಿರಿ, ಶಹಾಪುರಃ ತಾತ್ಕಾಲಿಕವಾಗಿ ಇಲ್ಲಿನ ಹಳೇ ಬಸ್ ನಿಲ್ದಾಣದ ಆವರಣದೊಳಗೆ ಬಸ್ ನಿಲುಗಡೆಗೆ ಸಮ್ಮತಿ ನೀಡಿ, ಶುಕ್ರವಾರ ಬಸ್ ನಿಲುಗಡೆಗೆ ಆರಂಭಿಸಿದಕ್ಕಾಗಿ ಇಲ್ಲಿನ ಶಹಾಪುರ ನಾಗರಿಕ ಹೋರಾಟ ಒಕ್ಕೂಟ ಸಮಿತಿಯ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.
ಹಳೇ ಬಸ್ ನಿಲ್ದಾಣ ಕಟ್ಟಡ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಬಸ್ ಸಂಚಾರ, ನಿಲುಗಡೆಗೆ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ನಗರದ ಹೆದ್ದಾರಿ ಮೇಲೆ ಬಸ್ ನಿಲುಗಡೆಯಿಂದಾಗಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ಹಲವರು ಬಾರಿ ಪ್ರಾಣಪಾಯದಂಥ ಘಟನೆಗಳು ಜರುಗುತ್ತಿವೆ.
ಇದೇ ಅ.29 ರಂದು ನಡೆದ ಬಸ್ ಅಪಘಾತದಲ್ಲಿ 5 ವರ್ಷದ ಮಗುವೊಂದು ಮೃತಪಟ್ಟಿದ್ದು, ಮಗುವಿನ ಅಜ್ಜಿ ಸಾವು ನೋವಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾಳೆ. ಈ ಘಟನೆಗೆ ಸಂಬಂಧಿಸಿದಂತೆ ಹೋರಾಟ ಸಮಿತಿವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು.
ಹಳೇ ಬಸ್ ನಿಲ್ದಾಣ ಹತ್ತಿರ ಒಂದಡೆ ಆಟೋ ಸ್ಟ್ಯಾಂಡ್, ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಬಸ್ ನಿಲುಗಡೆಗೆ ಸುರಕ್ಷಿತವಾಗಿರಲಲ್ಲಿ. ಈ ಕುರಿತು ಕೂಡಲೇ ಬಸ್ ನಿಲ್ದಾಣ ಒಳಾಂಗಣ ಕಾಮಗಾರಿ ಮುಗಿದಿದ್ದು, ಕೂಡಲೇ ಬಸ್‍ಗಳು ನಿಲ್ದಾಣದೊಳಗೆ ತಾತ್ಕಾಲಿಕವಾಗಿ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವ ಜೊತೆಗೆ ಅಪಘಾತ ತಡೆಗೆ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಲಾಗಿತ್ತು.
ನಾಗರಿಕರ ಬೇಡಿಕೆಗೆ ಕೂಡಲೇ ಸ್ಪಂಧಿಸಿದ ಅಧಿಕಾರಿಗಳು ಶುಕ್ರವಾರ ಬಸ್‍ಗಳನ್ನು ಹಳೇ ಬಸ್ ನಿಲ್ದಾಣದೊಳಗೆ ಪ್ರವೇಶ ಪಡೆಯುತ್ತಿವೆ. ಅಲ್ಲದೆ ಬಸ್ ಒಳಗಡೆ ಬಸ್ ಸಮರ್ಪಕವಾಗಿ ಒಳ ಪರವೇಶಿಸಲು ನಿಲ್ದಾಣ ಗೇಟ್ ಮುಂದೆ ಕಟ್ಟಿದ್ದ ರಸ್ತೆ ವಿಭಜಕ ಗೋಡೆಯನ್ನು ಹೊಡೆದು ಹಾಕಬೇಕು. ಅಲ್ಲದೆ ಬಾಲಕಿಯರ ಕಾಲೇಜಿಗೆ ತೆರಳುವ ಮಾರ್ಗದಲ್ಲೂ ರಸ್ತೆ ವಿಭಜಕವನ್ನು ಹೊಡೆಯುವ ಮೂಲಕ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಿಸಲು ಸುಗಮ ವ್ಯವಸ್ಥೆ ಕಲ್ಪಿಸಬೇಕೆಂದು ನಾಗರಿಕ ಹೋರಾಟ ಸಮಿತಿ ಮನವಿ ಮಾಡಿದೆ.
———————————-
ಹಳೇ ಬಸ್ ನಿಲ್ದಾಣದೊಳಗೆ ಬಸ್ ಪ್ರವೇಶ ಪಡೆಯುವ ವ್ಯವಸ್ಥೆ ಮಾಡಿದ ಅಧಿಕಾರಿಗಳಿಗೆ ಕೃತಜ್ಞತೆ. ನಾಗರಿಕರ ಬೇಡಿಕೆ ಸ್ಪಂಧಿಸಿದ ಅಧಿಕಾರಗಳ ಕಾರ್ಯಕ್ಕೆ ಸಂತಸ ತಂದಿದೆ. ಕೂಡಲೇ ಬಸ್ ನಿಲ್ದಾಣ ನಾಗರಿಕ ಸೇವೆಗೆ ಲಭ್ಯವಾಗಬೇಕು. ಅಲ್ಲದೆ ನಿಲ್ದಾಣ ಮುಂದಿನ ಎರಡು ಗೇಟ್ ಮುಂದೆ ಇರುವ ರಸ್ತೆ ವಿಭಜಕ ಹೊಡೆದು ಹಾಕುವ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು.
–ಅಪ್ಪಣ್ಣ ದಶವಂತ. ನಗರಸಭೆ ಸದಸ್ಯ.
———————————
ನಾಗರಿಕ ಹೋರಾಟ ಸಮಿತಿಯ ಬೇಡಿಕೆಯಂತೆ ರಾಜ್ಯೋತ್ಸವ ದಿನದಂದು ಬಸ್ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಿದ ಅಧಿಕಾರಿಗಳ ಕಾರ್ಯಕ್ಕೆ ಕೃತಜ್ಞತೆ ಮತ್ತು ಸಂತಸ ತಂದಿದೆ. ಅದರಂತೆ ನಾಗರಿಕರ ಸುಲಭ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಅಪಘಾತದಲ್ಲಿ ಮೃತಪಟ್ಟ ಬಾಲಕನ ಕುಟುಂಬಕ್ಕೆ ಪರಿಹಾರ ಒದಗಿಸಬೇಕು.
–ಗುರು ಕಾಮಾ. ಮಾಜಿ ಅಧ್ಯಕ್ಷ. ನಗರ ಪ್ರಾಧಿಕಾರ ಶಹಾಪುರ.
———————-