ಪ್ರಮುಖ ಸುದ್ದಿ

ಮಂಗಳಮುಖಿಯರ ಮೇಲೆ ನಡೆದ ಹಲ್ಲೆ, ಕೊಲೆ ಪ್ರಕರಣಗಳ ತನಿಖೆಯಾಗಲಿ

ಮಂಗಳಮುಖಿಯರಿಗೆ ರಕ್ಷಣೆ ನೀಡದ ಪೊಲೀಸರು ಪ್ರಾರ್ಥನಾ ಆರೋಪ

ಮಂಗಳಮುಖಿಯರಿಗೂ ಜೀವನವಿದೆ ಅಸಡ್ಡೆ ಬೇಡ-ಪ್ರಾರ್ಥನಾ

ಯಾದಗಿರಿ, ಶಹಾಪುರಃ ರಾಜ್ಯದಾದ್ಯಂತ ಮಂಗಳಮುಖಿಯರ ಮೇಲೆ ಅನಗತ್ಯ ಹಲ್ಲೆ, ಅತ್ಯಾಚಾರ ಸೇರಿದಂತೆ ಇತರೆ ಘಟನೆಗಳು ನಡೆದಾಗ್ಯು ಪೊಲೀಸರು ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳದೆ ಅಸಡ್ಡೆ ತೋರುತ್ತಿದ್ದಾರೆ ಎಂದು ಕೆಚ್ಚೆದೆಯ ಕನ್ನಡ ರಕ್ಷಣಾ ವೇದಿಕೆ ಮಂಗಳಮುಖಿಯರ ಘಟಕದ ರಾಜ್ಯಧ್ಯಕ್ಷೆ ಪ್ರಾರ್ಥನಾ ಆರೋಪಿಸಿದರು.

ನಗರದ ವೈಷ್ಣವಿ ವಸತಿ ಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾದಗಿರಿ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಹಿಂದೆ ಭೀಮವ್ವ ಎಂಬ ಮಂಗಳಮುಖಿ ಮೇಲೆ ಹಲ್ಲೆ ನಡೆಸಿ ಕೊಲೆಗೈಯಲಾಗಿತ್ತು. ಇದುವರೆಗೂ ಪೊಲೀಸರು ಈ ಕುರಿತು ಯಾವುದೇ ಪ್ರಕರಣದವು ದಾಖಲಿಸಿಕೊಂಡಿಲ್ಲ. ತನಿಖೆಯೂ ನಡೆಸುತ್ತಿಲ್ಲ ಎಂದು ದೂರಿದರು.

ಅಲ್ಲದೆ ಸುರಪುರ ತಾಲೂಕಿನ ಗೌಡಗೇರಿ ಗ್ರಾಮದವರಾದ ಮುಂಗಳಮುಖಿ ಸಲ್ಮಾಂ ಎಂಬುವರ ಮೇಲೆ ಇತ್ತೀಚೆಗೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ಪ್ರಕರಣವು ಸಮರ್ಪಕ ತನಿಖೆ ನಡೆಸುತ್ತಿಲ್ಲ. ಪೊಲೀಸರು ಮಂಗಳಮುಖಿಯರು ಇವರನ್ನು ಯಾರು ಕೇಳುತ್ತಾರೆ ಎಂದು ಪ್ರಕರಣಕ್ಕೆ ಚುರುಕು ನೀಡದೆ ಮುಚ್ಚಿ ಹಾಕುತ್ತಿದ್ದಾರೆ.

ಇದು ಮಾನವೀಯತೆ ಅಲ್ಲ. ಮಂಗಳಮುಖಿಯರು ಮನುಷ್ಯರೇ ಅವರು ಜೀವಿಗಳು ತಾನೆ. ಈ ಕುರಿತು ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಬೇಕು. ತಪ್ಪಿಸ್ಥರ ವಿರುದ್ಧು ಕಠಿಣ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ನಮ್ಮ ವೇದಿಕೆಯಿಂದ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವದು ಎಂದು ಎಚ್ಚರಿಸಿದರು.

ಮಂಗಳಮುಖಿಯರನ್ನು ಹೆತ್ತವರು ಸೇರಿದಂತೆ ಯಾರೊಬ್ಬ ಸಂಬAಧಿಕರು ಸಹ ಕಾಳಜಿವಹಿಸುವದಿಲ್ಲ. ಇದು ಮುನುಷ್ಯ ಕುಲಕ್ಕೆ ಅವಮಾನ. ಅಲ್ಲದೆ ಮಂಗಳಮುಖಿಯರಲ್ಲಿ ಯಾರೇ ತಪ್ಪು ಮಾಡಿದಲ್ಲಿ ಅವರ ವಿರುದ್ಧವು ಪೊಲೀಸರು ಕ್ರಮಕೈಗೊಳ್ಳಲಿ. ಆದರೆ ಬಹಳಷ್ಟು ಕಡೆ ಕುಡುಕರು ಮಂಗಳಮುಖಿಯರನ್ನು ಅತ್ಯಾಚಾರ ಮಾಡುವದು, ನಂತರ ಅರಿವಿಗೆ ಬಂದ ನಂತರ ಎಂತಹ ಕೆಲಸವಾಯ್ತು.

ಈ ವಿಷಯ ಜನರಿಗೆ ಹೇಳುತ್ತಾರೆ ಎಂದುಕೊAಡು ಅವರನ್ನು ಕೊಂದು ಹಾಕುವಂತ ಕೆಲಸಗಳು ನಡೆದಿವೆ. ಕಾರಣ ಪೊಲೀಸರು ಈ ಘಟನೆಗಳ ಕುರಿತು ಪರಾಮರ್ಶಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಎಲ್ಲೆ ಮಂಗಳಮುಖಿಯರ ಜೊತೆ ಅಸ್ಭಯ, ಹಲ್ಲೆ ಅತ್ಯಾಚಾರ ನಡೆದಿದೆ. ಅವೆಲ್ಲ ಪ್ರಕರಣಗಳಿಗೆ ಮರು ಜೀವ ನೀಡಬೇಕು.

ಅನ್ಯಾಯ ಮಾಡಿದವರಿಗೆ ಶಿಕ್ಷಯಾಗಬೇಕು. ಯಾರೇ ಅನ್ಯಾಯ ಮಾಡಿದರೂ ಅವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ. ಮುಂಬರುವ ದಿನಗಳಲ್ಲಿ ಮಂಗಳಮುಖಿಯರ ಸಮುದಾಯ ಕುರಿತು ಅವರ ಬೆಳವಣಿಗೆ, ದುಡಿಮೆ, ಉದ್ಯಮ ನಡೆಸಲು ಬೇಕಾಗುವ ಸಹಕಾರ, ಸಹಮತ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವದು ಎಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button