ಬಾರ್ & ರೆಸ್ಟೋರೆಂಟ್ ಗಳಿಗೆ ದೇವರ ಹೆಸರು ಇಡುವಂತಿಲ್ಲ -ಕೋಟ ಶ್ರೀನಿವಾಸ ಚಿಂತನೆ
ಬಾರ್ & ರೆಸ್ಟೋರೆಂಟ್ ಗಳಿಗೆ ದೇವರ ಹೆಸರು ಇಡುವಂತಿಲ್ಲ ಶೀಘ್ರ ಆದೇಶ ಜಾರಿಗೆ ಸರ್ಕಾರ ಚಿಂತನೆ
ಬೆಂಗಳೂರಃ ರಾಜ್ಯದಲ್ಲಿ ಮಧ್ಯ ನಿಷೇಧ ಜಾರಿ ಮಾಡುವ ಕೂಗು ಹಲವಾರು ವರ್ಷಗಳಿಂದ ಕೇಳಿ ಬರುತ್ತಿದೆ. ಹಲವು ಸರ್ಕಾರಗಳು ಈ ಕುರಿತು ಚಿಂತನೆಯು ನಡೆಸಿದ್ದವು. ಆದರೆ ಇದುವರೆಗೂ ಯಾವ ಸರ್ಕಾರವು ಮಧ್ಯ ನಿಷೇಧ ಮಾಡುವ ಅಚಲ ನಿರ್ಧಾರ ಕೈಗೊಳ್ಳಲಿಲ್ಲ.
ಆದರೆ ಇದೀಗ ಅಬಕಾರಿ ಸಚಿವ ಕೋಟ್ ಶ್ರೀನಿವಾಸ ಅವರು ಬಾರ್ ಆಂಡ್ ರೆಸ್ಟೋರೆಂಟ್ ಗೆ ಸಂಬಂಧಿಸಿದಂತೆ ಮಹತ್ವದ ಆದೇಶವೊಂದು ಹೊರಡಿಸಲು ನಿರ್ಧರಿಸಿದ್ದು, ರಾಜ್ಯದ ಎಲ್ಲಾ ಬಾರ್ ಮತ್ತು ರೆಸ್ಟೋರೆಂಟ್ ಗಳಿಗೆ ಇರುವ ದೇವರ ನಾಮವನ್ನು ತೆಗೆದು ಹಾಕುವ ಚಿಂತನೆ ನಡೆಸಿದ್ದಾರೆ. ಈ ಕುರಿತು ತಜ್ಞರ ಸಲಹೆ ಪಡೆದು ಶೀಘ್ರದಲಿ ಆದೇಶ ಹೊರಡಿಸಲಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಬಾರ್ ಆಂಡ್ ರೆಸ್ಟೋರೆಂಟ್ ನಡೆಸುವ ಮಾಲೀಕರು ತಮ್ಮ ಇಷ್ಟದೇವರ ಅಥವಾ ಮನೆ ದೇವರ ಹೆಸರನ್ನು ಇಡುತ್ತಿದ್ದು.
ಉದಾಹರಣೆಗೆ ಮಂಜುನಾಥ ಬಾರ್ ಆಂಡ್ ರೆಸ್ಟೊರೆಂಟ್, ವೆಂಕಟೇಶ್ವರ ವೈನ್ಸ್ ಹೀಗೆ ಹೆಸರನ್ನು ಹೊಂದಿದ್ದ ಬಾರ್ ಗಳು ವ್ಯವಹಾರ ನಡೆಸುತ್ತಿದ್ದವು.
ಹೀಗಾಗಿ ಸರ್ಕಾರ ಇನ್ಮುಂದೆ ದೇವರ ಹೆಸರಿಟ್ಟು ಬಾರ್ ಆಂಡ್ ರೆಸ್ಟೋರೆಂಟ್ ವ್ಯವಹಾರ ನಡೆಸುವಂತಿಲ್ಲ ಎಂಬ ನಿರ್ಧಾರ ಕುರಿತು ಆದೇಶ ಪ್ರಕಟಿಸಲಿದೆ.
ಇನ್ಮುಂದೆ ಯಾವುದೇ ಬಾರ್ & ರೆಸ್ಟೋರೆಂಟ್ ಗಳಿಗೆ ದೇವರ ಹೆಸರು ಇಡುವಂತಿಲ್ಲ. ದೇವರ ಹೆಸರನ್ನು ಬಿಟ್ಟು ಬೇರೆ ಹೆಸರನ್ನು ಇಡುವದು ಒಳಿತು.