ಸಗರ ಗ್ರಾಮದಲ್ಲಿ ಕಾಲ ಕ್ಷಣಿಕ ಕಣೋ ಚಿತ್ರೀಕರಣಕ್ಕೆ ಚಾಲನೆ
ಪರಿಶ್ರಮದ ಫಲಗಳು ಯಶಸ್ವಿಗೆ ಕಾರಣ – ಕಾಳಹಸ್ತೆಂದ್ರ ಶ್ರೀ
ಯಾದಗಿರಿ,ಶಹಾಪುರಃ ಜೀವನದಲ್ಲಿ ಪ್ರತಿಯೊಬ್ಬರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವದು ಅನಿವಾರ್ಯತೆಗಳಿದ್ದು ಅವುಗಳನ್ನು ಸಾಧಿಸಿಕೊಳ್ಳಲು ಮನುಷ್ಯ ಸತತ ಪರಿಶ್ರಮ ಪಡಬೇಕಾಗಿದೆ. ಈ ಪ್ರಯತ್ನಾಧಿಗಳ ಪ್ರತಿಫಲಗಳಿಂದ ಯಶಸ್ವಿ ಸಾಧ್ಯವಿದೆ ಎಂದು ನಗರದ ಏಕದಂಡಿಗಿ ಮಠದ ಕಾಳಹಸ್ತೇಂದ್ರ ಮಹಾಸ್ವಾಮಿಗಳು ತಿಳಿಸಿದರು.
ತಾಲೂಕಿನ ಸಗರ ಗ್ರಾಮದಲ್ಲಿ ಶ್ರೀ ಮೌನೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಕಾಲ ಕ್ಷಣಿಕ ಕಣೋ ಕನ್ನಡ ಚಲನ ಚಿತ್ರೀಕರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಕೆಳ ದರ್ಜೆಯ ಕಾಯಕಲ್ಪಗಳನ್ನು ರೂಢಿಸಿಕೊಂಡಲ್ಲಿ ಮೇಲ್ದರ್ಜೆಗೆ ಏರಲು ಸಹಕಾರಿಯಾಗಲಿದೆ. ಕೋಟಿಗಟ್ಟಲೆ ಹಣ ಸುರಿದು ಸ್ಟಾರ್‍ಗಳ ಪ್ರಚಾರಕ್ಕೆ ಕೋಟ್ಯಂತರ ಖರ್ಚು ಮಾಡಿ ಚಿತ್ರ ಬಿಡುಗಡೆ ಮಾಡುವದನ್ನು ಕಂಡಿದ್ದೇವೆ. ನಮ್ಮ ಭಾಗದ ಈ ಚಿತ್ರ ತಂಡಕ್ಕೆ ಎಲ್ಲರೂ ಸಹಕಾರ ನೀಡಬೇಕು.
ನಮ್ಮೂರಿನಲ್ಲಿ ಚಿತ್ರೀಕರಿಸುತ್ತಿರುವ ಈ ತಂಡಕ್ಕೆ ಕೈಲಾದ ಸಹಕಾರ ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಚಿತ್ರೀಕರಣ ತಂಡ ಸಗರ ನಾಡಿನ ಹಿರಿಮೆಯನ್ನು ಗರಿಗೆದರಿಸಿಕೊಂಡು ರಾಜ್ಯದ್ಯಾಂತ ಪಸರಿಸಲಿ ಎಂದು ಹಾರೈಸಿದರು.
ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ ತಾತಾ ಮಾತನಾಡಿ, ಮೂರ್ತಿ ಚಿಕ್ಕದಾಗಿದ್ದರೂ ಕಿರ್ತಿ ದೊಡ್ಡದು ಎನ್ನವಂತೆ ಯುವಕರು ತಮ್ಮ ಆಸಕ್ತಿಯಿಂದ ಚಲನ ಚಿತ್ರ ತಯಾರಿಸಿ ಕಲ್ಯಾಣ ಕರ್ನಾಟಕದ ಹೆಮ್ಮೆಗೆ ಪಾತ್ರರಾಗಲಿ ಎಂದು ಆಶಿಸಿದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ಸ್ಥಳೀಯ ಒಕ್ಕಲಿಗೇರ ಹೀರೆಮಠದ ಮರಳ ಮಹಾಂತ ಶಿವಾಚಾರ್ಯರು ಮತ್ತು ನಾಗಠಾಣಾ ಮಠದ ಸೋಮೇಶ್ವರ ಸ್ವಾಮಿಗಳುವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಜಿಪಂ ಮಾಜಿ ಸದಸ್ಯ ಬಸನಗೌಡ ಸುಬೇದಾರ ವಹಿಸಿದ್ದರು. ಮುಖಂಡರಾದ ನಾಗಣಗೌಡ ಸುಬೇದಾರ, ಶಂಕರನಾಯಕ ಸುರಪುರ, ಬಲಭೀಮ ನಾಯಕ, ಶ್ರೀಕಾಂತಗೌಡ ಸುಬೇದಾರ, ಮಂಜುನಾಥ ನಾಯಕ ಬೈರಿಮಡ್ಡಿ, ಪುರುಶೋತ್ತಮ, ಮಹಿಬೂಬಸಾಬ್ ಉಪಸ್ಥಿತರಿದ್ದರು.
ಚಿತ್ರಕಥೆ, ನಿರ್ಮಾಪಕ ಸಂತೋಷ ಪತ್ತಾರವರ ನೇತೃತ್ವದಲ್ಲಿ ಸಂಭಾಷಣೆ ನಿರ್ಮಾಣ ಅಂಬ್ರೇಶ ಸಿ. ಪತ್ತಾರ, ಶೋಭಾ ಚಿದಾನಂದ, ಮಾನಯ್ಯ ಆಚಾರ್ಯ, ದೊಡ್ಡಯ್ಯ ಹೀರೆಮಠ, ವರ್ಮಾ ಶೆಟ್ಟಿ, ಛಾಯಗ್ರಾಹಕ ಜೆ.ಪಿ.ಮಾನೆ, ಸಂಗೀತ ಶ್ರೀಶಾಸ್ತ್ರೀ, ಸಂಕಲನಕಾರ ಸುಭಾಶ, ಸಹ ನಿರ್ದೇಶಕ ಎಸ್.ವಿ.ಲಕ್ಷ್ಮೀ ಸೇರಿದಂತೆ ಸಹನಟರು ಗ್ರಾಮದ ಗಣ್ಯರು, ಹಿರಿಯರು ಉಪಸ್ಥಿತರಿದ್ದರು.