ಪ್ರಮುಖ ಸುದ್ದಿ
ಸೈಡಲ್ಲಿ ನಿಲ್ಲಿಸಿದ ಕಾರಿಗೆ ಲಾರಿ ಡಿಕ್ಕಿ ನಮೋಶಿ ಪ್ರಾಣಪಯದಿಂದ ಪಾರು
ಕಾರಿಗೆ ಲಾರಿ ಡಿಕ್ಕಿ ನಮೋಶಿ ಪ್ರಾಣಪಯದಿಂದ ಪಾರು
ಯಾದಗಿರಿಃ ಮಾಜಿ ಎಂ.ಎಲ್.ಸಿ ಬಿಜೆಪಿ ಮುಖಂಡ ಶಶೀಲ್ ನಮೋಶಿಯವರ ಕಾರಿಗೆ ಹಿಂಬದಿಯಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪತಿಣಾಮ ಕಾರು ರಸ್ತೆಯಿಂದ ಹೊಲಕ್ಕೆ ನುಗ್ಗಿದ್ದು ನುಜ್ಜುಗುಜ್ಜಾಗಿದೆ ಅದೃಷ್ಟವಶಾತ್ ನಮೋಶಿಯವರು ಸೇರಿದಂತೆ ಕಾರೊಳಗಿದ್ದ ಇನ್ನಿಬ್ಬರು ಪ್ರಾಣಪಾಯದಿಂದ ಪಾರಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಲಾರಿ ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.