ಪ್ರಮುಖ ಸುದ್ದಿ
ಜಾನುವಾರು ಪ್ರಾಣ ಉಳಿಸಲು ಹೋಗಿ ಕಾರು ಪಲ್ಟಿ
ಜಾನುವಾರು ಪ್ರಾಣ ಉಳಿಸಲು ಹೋಗಿ ಕಾರು ಪಲ್ಟಿ
ಯಾದಗಿರಿ: ಕಾರಿಗೆ ಅಡ್ಡಲಾಗಿ ಬಂದ ಹಸುವನ್ನು ಉಳಿಸಲು ಹೋಗಿ ಕಾರೊಂದು ಪಲ್ಟಿಯಾಗಿದ್ದು ಅದೃಷ್ಟವಶಾತ್ ಚಾಲಕ ಪ್ರಾಣಪಾಯದಿಂದ ಪಾರಾಗಿದ್ದು, ಇನ್ನೋರ್ವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಾರು ಸಂಪೂರ್ಣ ಜಖಂಗೊಂಡ ಘಟನೆ
ತಾಲೂಕಿನ ಕಂಚಗಾರಹಳ್ಳಿ ಗೇಟ್ ಬಳಿ ಶುಕ್ರವಾರ ರಾತ್ರಿ ೧೦:೩೦ಕ್ಕೆ ಸಂಭವಿಸಿದೆ.
ಯಾದಗಿರಿ ವಾರ್ತಾ ಇಲಾಖೆಯ ಸಿಬ್ಬಂದಿ ಆಶೀಷ ಕುಮಾರ ಅವರು, ತಮ್ಮ ಗೆಳೆಯರ ಜೊತೆ ಕಲಬುರಗಿಗೆ ತೆರಳುವಾಗ ಈ ಘಟನೆ ನಡೆದಿದೆ.
ಸ್ವತಃ ಕಾರು ಡ್ರೈವಿಂಗ ಮಾಡುತ್ತಿದ್ದ ಆಶೀಷಕುಮಾರ ಹೇಳಿಕೆ ಪ್ರಕಾರ, ಅಡ್ಡ ಬಂದ ದನ ಉಳಿಸುವ ವೇಳೆ ಕಾರು ಪಲ್ಟಿಯಾಗಿದೆ. ತನ್ನ ಜೊತೆಯಲ್ಲಿ ಸ್ನೇಹಿತನಿಗೆ ಸಣ್ಣಪುಟ್ಟಗಾಯಗಳಾಗಿದ್ದು, ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಆಶೀಷ ತಿಳಿಸಿದ್ದಾರೆ.