ಪ್ರಮುಖ ಸುದ್ದಿ
ರಾಮ ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ ಎಂದು ಗೊತ್ತೆ.?
ವಿವಿ ಡೆಸ್ಕ್ ಃ ಅಯೋಧ್ಯದಲ್ಲಿ ರಾಮ ಜನ್ಮ ಭೂಮಿ ವಿವಾದ ಬಗೆಹರಿದಿರುವ ಹಿನ್ನೆಲೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬರುವ ಏಪ್ರೀಲ್ 2, 2020 ರಂದು ರಾಮನವಮಿ ದಿನದಂದೆ ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಮಂದಿರ ನಿರ್ಮಾಣ ಜವಬ್ದಾರಿ ಹೊತ್ತ ಮೂಲಗಳಿಂದ ತಿಳಿದು ಬಂದಿದೆ. 2020 ಏಪ್ರೀಲ್ 2 ರಂದು ಶಂಕುಸ್ಥಾಪನೆಗೆ ಸಿದ್ಧತೆ ಮಾಡಲಾಗುತ್ತಿದೆ. 8 ತಿಂಗಳ ಕಾಲ ಬುನಾದಿ ಕಾರ್ಯ ನಡೆಯಲಿದೆ. ಮೂರು ವರ್ಷದಲ್ಲಿ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಸಂಭವನೀಯತೆ ಇದೆ ಎಂದು ಹೇಳಲಾಗುತ್ತಿದೆ.