ಪ್ರಮುಖ ಸುದ್ದಿ
ಹೇಳಿಕೆ ನೀಡಿದ್ದಕ್ಕೆ ಕ್ಷಮೆಯಾಚಿಸಿದ ರಾಹುಲ್ ಗಾಂಧೀ
ವಿವಾ ಡೆಸ್ಕ್ ಃ ರಾಹುಲ್ ಹೇಳಿಕೆ ದುರದೃಷ್ಟಕರ. ಹೇಳಿಕೆ ನೀಡುವಾಗ ಎಚ್ಚರಿಕೆಯಿಂದರಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಧೀಶರು ರಾಹುಲ್ ಗಾಂಧಿಗೆ ಎಚ್ಚರಿಕೆ ನೀಡಿದರು.
ಚೌಕಿದಾರ ಚೋರ್ ಹೈ ಎಂಬ ಹೇಳಿಕೆ ಜೊತೆಗೆ ಈ ವಿಚಾರ ಸುಪ್ರೀಂಕೋರ್ಟ್ ಸಹ ಹೇಳಿದೆ ಎಂದಿದ್ದ ರಾಹುಲ್ ಗಾಂಧಿಗೆ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ರಾಹುಲ್ ಹೇಳಿಕೆ ಪ್ರಶ್ನಿಸಿ ನ್ಯಾಯಾಂಗ ನಿಂದನೆ ಪ್ರಕರಣವನ್ನು ಬಿಜೆಪಿ ಸಂಸದೆ ಮೀಣಾಕ್ಷಿ ಲೇಖಿ ದಾಖಲಿಸಿದ್ದಾರೆ. ಹೇಳಿಕೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧೀ ಕ್ಷಮೆಯಾಚನೆ ಮಾಡಿದರು. ರಾಹುಲ್ ಗಾಂಧೀ ಕ್ಷಮೆಯಾಚನೆ ಸ್ವೀಕರಿಸಿದ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಬಿಟ್ಟಿದೆ.
ಈ ಸಂದರ್ಭ ಯಾವುದೇ ಹೇಳಿಕೆ ನೀಡುವಾಗ ಎಚ್ಚರಿಕೆಯಿಂದಬೇಕು ಎಂದು ನಿರ್ದೇಶನ ನೀಡಿದೆ.