ಬಸವಭಕ್ತಿಸರಣಿ

ತೀರ್ಥವ ಪಡೆದವರೆಲ್ಲ ತಿರುನಾರಾಯಣನ ನಾಮಧಾರಿಗಳೆ.?

ಹರಿದಾಸ ಪರಂಪರೆಯ ಶ್ರೇಷ್ಠ ಸಂತ ಕವಿ ಕನಕದಾಸರು

-ರಾಘವೇಂದ್ರ ಹಾರಣಗೇರಾ  9901559873
ಹರಿದಾಸ ಶ್ರೇಷ್ಠರಲ್ಲಿ ಅಗ್ರಗಣ್ಯರಾದ ಕನಕದಾಸರು ಕನ್ನಡದ ಶ್ರೇಷ್ಠ ಸಂತ ಕವಿ, ಅನುಭಾವಿ, ಮಹಾಜ್ಞಾನಿ ವ್ಯಾಸರಾಯರ ಶಿಷ್ಯರಾಗಿ ತನ್ನ ವಿನಯ, ಭಗವದ್ಭಕ್ತಿ, ಪಾಂಡಿತ್ಯಾದಿಗಳಿಂದ ಮಹಾಮಹಿಮರೆನಿಸಿಕೊಂಡರು. ದಾಸಕೂಟದಲ್ಲಿ ಒಬ್ಬರಾದ ಅವರು ಆದಿಕೇಶವನ ಮಹಾಭಕ್ತರಾಗಿದ್ದರು. ಕರ್ನಾಟಕದ ಸಾಂಸ್ಕ್ರತಿಕ ಚರಿತ್ರೆಯಲ್ಲಿ ಒಂದು ಮೈಲುಗಲ್ಲಾದ ಸಾಧಕ ಪುರುಷರಲ್ಲಿ ಒಬ್ಬರಾದ ಕನಕದಾಸರ ಬದುಕು ಮತ್ತು ಬರಹ ಆಧುನಿಕ ಕಾಲಘಟ್ಟದಲ್ಲಿ ಹಲವಾರು ಸವಾಲುಗಳಿಗೆ ಮುಖಾ ಮುಖಿಯಾಗುತ್ತವೆ. ಅವರ ಚಿಂತನೆಗಳು ಹೊಸ ಹೊಸ ಓದುಗಳಿಗೆ ತೆರೆದುಕೊಳ್ಳುತ್ತವೆ. ಅವರು ನಾಡಿನ ಮುಖ್ಯವಾದ ಸಾಂಸ್ಕ್ರತಿಕ ಪ್ರತಿಮೆಯು ಹೌದು.

ತಳ ಸಾಂಸ್ಕ್ರತಿಕ ಸಮೂದಾಯದಿಂದ ಬಂದವರಾಗಿದ್ದರೂ ಸಹ ಅವರ ಭಕ್ತಿ, ಅನುಭಾವ ಹಾಗೂ ಸಾಹಿತ್ಯ ರಚನೆಗಳ ಮೂಲಕ ಶ್ರೇಷ್ಠ ಅನುಭಾವಿಯಾಗಿದ್ದಾರೆ. ಕನಕದಾಸರು ಯಾವ ಮತದ ಸಿದ್ದಾಂತಕ್ಕೆ ಒಲಿಯದೆ, ಎಲ್ಲಾ ಮತಗಳಲ್ಲೂ ಅಡಕವಾಗಿರುವ ಒಳ್ಳೆಯ ತತ್ವಗಳನ್ನು ಪ್ರತಿಪಾದಿಸಿದರು. ಹರಿ-ಹರರಲ್ಲಿ ಬೇಧವಿಲ್ಲವೆಂದು ತಮ್ಮ ಕೃತಿಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಮೋಹನ ತರಂಗಿಣಿಯೂ ಪೌರಾಣಿಕ ಮತ್ತು ಕಾಲ್ಪನಿಕವು ಆದ ಕೃತಿಯಾಗಿದ್ದು ಈ ಕೃತಿಯ ಬಹುಪಾಲು ಶೃಂಗಾರ ಸಾರವನ್ನು ಹೊಂದಿದೆ. ನಳಚರಿತ್ರೆಯು ಶೋಕ-ಕರುಣ ರಸದಿಂದಾವೃತವಾಗಿದ್ದು, ನಳ-ದಮಂತಿಯರ ದೈವೀಪ್ರೇಮವನ್ನು ಸಾರುತ್ತದೆ. ಹರಿಭಕ್ತಿಸಾರ ಹೆಸರೆ ಸೂವಿಸಿದಂತೆ ಹರಿಯ ಮಹಿಮೆಯನ್ನು ಕೊಂಡಾಡುವುದಾಗಿದೆ. ರಾಮಧ್ಯಾನ ಚರಿತೆಯು ಭಂಡಾಯ ಮನೋದರ್ಮವನ್ನು, ಸಮಾಜಕ್ಕೆ ಸೂಕ್ಷ್ಮತೆಯನ್ನು ಒಳಗೊಂಡಿದೆ. ನರಸಿಂಹ ಸ್ತುತಿ ಇವು ಕನಕದಾಸರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಅನಘ್ರ್ಯ ರತ್ನಗಳು. ‘ಕಾಗಿನೆಲೆಯಾದಿಕೇಶವ’ ಎಂಬ ಅಂಕಿತದಲ್ಲಿ ಸಾವಿರಾರು ಕೀರ್ತನೆಗಳು ರಚಿಸಿದ್ದಾರೆ.

ಕೀರ್ತನೆ, ಮುಂಡಿಗೆ (ವಿಶಿಷ್ಟ ರೀತಿಯ ಒಗಟುಗಳು) ಷಟ್ಪದಿ ಹಾಗೂ ಸಾಂಗತ್ಯ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಅನನ್ಯ ಸಿದ್ದಿ ಪಡೆದ ಅವರು ತಮ್ಮ ಸಾಹಿತ್ಯದಲ್ಲಿ ನಮಗೆ ಕಾವ್ಯವನ್ನೂ, ಮೌಲ್ಯಗಳನ್ನೂ, ಸಂದೇಶಗಳನ್ನು ಉಳಿಸಿ ಹೋಗಿದ್ದಾರೆ. ಸಾಹಿತ್ಯ-ಸಂಗೀತಗಳ ಮೂಲಕ ಅನುಭವ-ಅನುಭಾವಗಳ ಎತ್ತರ ಬಿತ್ತರಗಳಿಗೆ ಕರೆದೊಯ್ದ ಹರಿದಾಸ ಶ್ರೇಷ್ಠರಲ್ಲಿ ಒಬ್ಬರಾಗಿದಾರೆ. ಅತ್ಯಂತ ಸರಳ ಭಾಷೆಯಲ್ಲಿ ಜನರಿಗೆ ಅವರು ಉತ್ತಮ ಬದುಕಿನ ಮಾರ್ಗದರ್ಶನ ತೋರಿದರು. ಕನಕದಾಸರು ರಚಿಸಿರುವ ಎಷ್ಟೋ ಹಾಡುಗಳು ಇನ್ನೂ ಜನತೆಯ ಮನದಲ್ಲಿ ಹಸಿರಾಗಿ ನಿಂತಿವೆ. ಅವರ ಕಿರ್ತನೆಗಳಲ್ಲಿ ಭಕ್ತಿಯ ಅನನ್ಯತೆಯ ಜೊತೆಗೆ ಲೋಕಜೀವನದ ಆದರ್ಶ ಮೌಲ್ಯಗಳ ಬಗೆಗೆ ತೀರ್ವವಾದ ಭಾಹು ಸ್ಪಂಧನವನ್ನು ಕಾಣಬಹುದು.

“ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ” ಎಂದು ಎಲ್ಲರ ಆಟ-ಹೋರಾಟವನ್ನು ಹಾಗೂ ಲೋಕದ ಡೊಂಕನ್ನು ಕಟುವಾಗಿ ವಿಡಂಬನೆ ಮಾಡಿದ್ದಾರೆ. ಜಾತಿಯ ನಂಬಿಕೆಗಳನ್ನು ಮೌಢ್ಯತೆಯನ್ನು, ಆಡಂಬರದ ಭಕ್ತಿಯನ್ನು ನಿರಾಕರಿಸಿದರು. ತಮ್ಮ ಕೀರ್ತನೆಗಳಲ್ಲಿ ಸಮಾಜದ ಕುಂದು-ಕೊರತೆಗಳನ್ನು ಮುಚ್ಚುಮರೆಯಿಲ್ಲದೆ ತೆರೆದಿಟ್ಟಿದ್ದಾರೆ. ವೈಯಕ್ತಿಕ ಮತ್ತು ಸಾಮಾಜಿಕ ಮಟ್ಟದಲ್ಲಿ ಜನರ ಲೋಪದೋಷಗಳನ್ನು ಎತ್ತಿ ತೋರಿಸಿ ಭಕ್ತಿಯ ಮೂಲಕವೇ ಹೇಗೆ ವ್ಯಕ್ತಿ ಮತ್ತು ಸಮಾಜ ಶುಚಿಯಾಗಿ ಇರಬಲ್ಲದು ಎಂಬುದನ್ನು ಸಾರಿದ ಅನುಭಾವಿ ಕನಕದಾಸರಾಗಿದ್ದಾರೆ.

“ಕುಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲಯನೇನಾದರೂ ಬಲ್ಲಿರಾ”, ಜಲವೇ ಕುಲಕೆ ತಾಯಿಯಲ್ಲವೇ ಎಂದು ಪ್ರಶ್ನಿಸಿದ ಕನಕರು ಜಾತಿ ಮತ್ತು ಧರ್ಮಗಳೆಂಬ ಸಂಕುಚಿತ ಭಾವನೆಗಳಿಂದ ತಮ್ಮನ್ನು ತಾವೇ ಕಟ್ಟಿಹಾಕಿಕೊಂಡಿರುವ ದುರ್ಜನರ ಬೂಟಾಟಿಕೆಯನ್ನು ಮತ್ತು ಸಾದು, ಸನ್ಯಾಸಿ, ಖಾವಿ, ಜಂಗಮ, ಮಠ, ದೇವರು, ದೆಗು¯ ಮುಂತಾದ ಮುಖವಾಡಗಳ ಮೂಲಕ ನಡೆಯುತ್ತಿರುವ, ಕಪಟತನ, ಮೋಸ್, ವಂಚನೆ, ಅನೇಕ ದುಷ್ಕøತ್ಯಗಳನ್ನು ಕನಕದಾಸರು ನೇರವಾಗಿ ಖಂಡಿಸಿದ್ದಾರೆ. ‘ಜಪವ ಮಾಡಿದರೇನು, ತಪವಾ ಮಾಡಿದರೇನು, ಕಪಟಗುಣ ವಿಪರೀತ ಕಲುಷಿತವುದ್ದವು ಎಂದು ಪ್ರಶ್ನಿಸುತ್ತಾರೆ’ ನೆಮವಿಲ್ಲದ ಹೊಮವೇತಕಯ್ಯ ಎಂದು ಡಾಂಭಿಕತನವನ್ನು ವಿರೋದಿಸುತ್ತಾರೆ.

ಶ್ರೀ ಕನಕದಾಸರ ಗೀತೆಗಳು ಮಾನವಕುಲದ ಮನೋವಿಕಸನಕ್ಕೆ ಆತ್ಮ ವಿಕಸನಕ್ಕೆ, ಮೌಢ್ಯ ನಿವಾರಣೆಗೆ
ಮತ್ತು ದೈವಿಕ ಚಿಂತನೆಗೆ ದಾರಿದೀಪವಾಗಿವೆ. ತೀರ್ಥವ ಪಡೆದವರೆಲ್ಲ ತಿರುನಾರಾಯಣನ ನಾಮಧಾರಿಗಳೆ

ಎಂದು ಎಲ್ಲಾ ಮತದವರ ಕಪಟತನವನ್ನು ತಿಳಿಸಿದರು. “ವರಕವಿಗಳ ಮುಂದೆ ನರಕವಿಗಳು ವಿದ್ಯೆ ತೋರಬಾರದು ಈ ಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು ಎಂದೂ ಸಾಮಾನ್ಯ ನೀತಿ-ನಡುವಳಿಕೆಯನ್ನು ಹಾಡಿನ ಮೂಲಕ ಲೋಕಾನುಭವ ಸಹಜ ನಿದರ್ಶನಗಳು ನೇರವಾಗಿ ಮನಮುಟ್ಟುವಂತೆ ತಿಳಿಸಿದ್ದಾರೆ. ಸಂಪೂರ್ಣವಾಗಿ ತಮ್ಮನ್ನು ಮಣ್ಣಿನ ಜೀವನದೊಂದಿಗೆ ಬದುಕು ಬರಹಗಳೆರಡರನ್ನು ಸಮೀಕರಿಸಿಕೊಂಡು ಗುರುತಿಸಿಕೊಂಡಿರುವ ಕನಕದಾಸರು ನಾಡ ಜನತೆಗೆ ಜನಮುಖಿ ಸಂದೇಶಗಳನ್ನು ತಲುಪಿಸುವಲ್ಲಿ ಯಶಸ್ವಿಯಾದರು.

ಅಡುಗೆಯ ಮಾಡಬೇಕಣ್ಣ | ನಾನೀಗ ಜ್ಞಾನ
ದಡುಗೆಯನ್ನು ಮಾಡಬೇಕಣ್ಣ
ಎಂಬ ತಮ್ಮ ಕೀರ್ತನೆಯ ಮೂಲಕ ಜ್ಞಾನದ ಮಹತ್ವವನ್ನು ಭೊದಿಸಿದ್ದಾರೆ.

ಡಾ|| ರಂ.ಶ್ರೀ ಮುಗಳಿಯವರು ಹೇಳುವಂತೆ “ಕನಕದಾಸರು ಯಾವೊಂದು ಮತದ ಪಡಿಯಚ್ಚಿನಲ್ಲಿ ಮಾತ್ರ ಬೆಳೆಯದೆ ಎಲ್ಲ ಮತದ ಸಾರಗ್ರಾಹಿಯಾದ ಪರಮಭಕ್ತರು” ಅವರಿಗೆ ಯಾವುದೇ ನಿರ್ದಿಷ್ಟ ಮತಕ್ಕಿಂತ ಮಾನವೀಯ ಮತವೇ ಮುಖ್ಯವಾಗಿತ್ತು. ಅವರ ಅನೇಕ ಕೀರ್ತನೆಗಳಲ್ಲಿ ವೈಚಾರಿಕ ಅವಿರ್ಭಾವವನ್ನು ತುಂಬಿದೆ. ಸಂಪ್ರದಾಯಕ ಚೌಕಟ್ಟಿನೋಳಗಿದ್ದು ಅದನ್ನು ಮಿರುವ ಅವರ ಮನೋಧರ್ಮದ ಹಿಂದೆ ಅಪಾರವಾದ ಜೀವಪರ, ಮಾನವೀಯಪರ ಕಳಕಳಿ ಕಂಡುಬರುತ್ತದೆ.

ಜನರು ಜಾತಿಯ ಹೆಸರಿನಲ್ಲಿ ಸಂಘಟನೆಗೊಳ್ಳುತ್ತಿರುವ ಮತ್ತು ಅಸ್ತವ್ಯಸ್ತವಾಗಿರುವ ಇಂದಿನ ಸಮಾಜದಲ್ಲಿ ತಳಮಳಕ್ಕೊಳಗಾಗಿರುವ ಇಂದಿನ ಬದುಕಿಗೆ ಕನಕದಾಸರ ಕೀರ್ತನೆಗಳು ಅಥವಾ ಸಾಹಿತ್ಯ ಪರಿಹಾರ ನೀಡುತ್ತದೆ ಎಂದು ಹೇಳಬಹುದು.

ಹಿಂದುಳಿದವರ ಅಜ್ಞಾನವನ್ನು ತಿಳಿಸುವ ಮೌಢ್ಯವನ್ನು ಒರೆಸುವ ಆತ್ಮವಿಶ್ವಾಸವನ್ನು ಕುದುರಿಸುವ, ಮನುಷ್ಯ ಬದುಕಿನ ಕ್ರಿಯಾಶೀಲತೆಯನ್ನು ಚಿಮ್ಮಿಸುವ ಕಾರಂಜಿಯಾಗಿ ಜಗತ್ತಿನ ಸಂದೇಶ ನೀಡಿದ ಕನಕದಾಸರು ವ್ಯಾಸರಾಯರಂಥ ಮಹಾನ್ ಗುರುಗಳ ಆತ್ಮೀಯತೆಗೆ ಪುರಂದರರಂತಹ ಸ್ನೇಹಜೀವಿಗೆ ಒಳಗಾಗಿ ಪರಂಪರೆಯ ಘಟ್ಟದೊಂದಿಗೆ ಸಂಬಂಧವೇರ್ಪಡಿಸಿದ ಅವರು ಮಾನವೀಯತೆಯ ಹರಿಕಾರರಾಗಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button