ಪ್ರಮುಖ ಸುದ್ದಿ
ಖರ್ಗೆಯವರು ಕಾಣೆ,-ಕಾಂಗ್ರೆಸ್, ಜೆಡಿಎಸ್ ಲೆಕ್ಕಕ್ಕಿಲ್ಲ- ಡಿವಿ ಸದಾನಂದ
ಸಿದ್ರಾಮಯ್ಯ ಏಕಾಂಗಿ, ಖರ್ಗೆ, ಎಚ್ಕೆ ಕಾಣೆ, ಡಿಕೆಶಿ-ಪರಂ ದಾರಿ ಬೇರೆ -ಸದಾನಂದ ವ್ಯಂಗ್ಯ
ಬೆಂಗಳೂರಃ ಉಪಚುನಾವಣೆಯಲ್ಲಿ ಸಿದ್ರಾಮಯ್ಯನವರು ಏಕಾಂಗಿಯಾಗಿದ್ದಾರೆ, ಇನ್ನೂ ಮಲ್ಲಿಕಾರ್ಜುನ ಖರ್ಗೆ ಮತ್ತು ಎಚ್ಕೆ.ಪಾಟೀಲ್ ಕಾಣೆಯಾಗಿದ್ದಾರೆ. ಡಿಕೆಶಿ ಮತ್ತು ಪರಮೇಶ್ವರ ಅವರ ದಾರಿಬೇರೆ ಇದೆ. ಹೀಗಾಗಿ ಕಾಂಗ್ರೆಸ್ನಲ್ಲಿ ಸಿದ್ರಾಮಯ್ಯ ಏಕಾಂಗಿಯಾಗಿ ಓಡಾಡುತ್ತಿದ್ದಾರೆ ಈ ಚುನಾವಣೆಯಲ್ಲಿ ಬಿಜೆಪಿ ಒಂದೇ ಶಕ್ತಿಯುತ ಪಕ್ಷವಾಗಿದೆ ಕಾಂಗ್ರೆಸ್ ಜೆಡಿಎಸ್ ಯಾವದು ಲೆಕ್ಕಕ್ಕಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ಉಪ ಚುಣಾವಣೆ ಪ್ರಚಾರ್ಥವಾಗಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ಕುಮಾರಸ್ವಾಮಿ ಅವರು ಕ್ಷೇತ್ರಕ್ಕೆ ಬರ್ತಾರೆ ಹೋಗುತ್ತಾರೆ. ಒಬ್ಬರ ಮನೆಯಲ್ಲಿ ತಿಂಡಿ ತಿಂತಾರೆ ಹೋಗ್ತಾರೆ, ಅವರಿಗೆ ತಿಂಡಿ ನಮ್ಗೆ ಓಟ್ ಅಷ್ಟೆ, ತಿಂಡಿ ಕೊಟ್ಟವರೇ ನಮಗೆ ಬಿಜೆಪಿ ಮತ ಹಾಕಲಿದ್ದಾರೆ ಎಂದು ವ್ಯಗ್ಯ ವ್ಯಕ್ತಪಡಿಸಿದರು.