ಪ್ರಮುಖ ಸುದ್ದಿ
ಸದಾನಂದಗೌಡ ಮಾತಾಡೋದು ನಕಲಿ ಶಾಮನಂತೆ-ಕುಮಾರಸ್ವಾಮಿ
ಬೆಂಗಳೂರಃ ಸದಾನಂದಗೌಡರು ಪ್ರಧಾನಿ ನರೇಂದ್ರ ಮೋದಿಯವರ ಹೆಸರಲ್ಲಿ ಮಾತನಾಡುತ್ತಾರೆ. ಇವರಿಗೆ ಸ್ವಂತವಾಗಿ ಬೆಳೆಯಲಿಕ್ಕೆ ಏನ್ ಕೆಲಸ ಮಾಡಿದ್ದಾರೆ. ಇವರು ಹೇಗೆ ಬೆಳೆದು ಬಂದಿದ್ದಾರೆ ಎಲ್ಲವೂ ಜನರಿಗೆ ಗೊತ್ತಿದೆ. ಇವರು ಮಾತಾಡೋದು ಒಂದು ತರಹ ನಕಲಿ ಶಾಮನಂತೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು, ಡಿವಿ ಸದಾನಂದಗೌಡ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಉಪ ಚುನಾವಣೆ ಹಿನ್ನೆಲೆ ನಗರದ ಲಕ್ಷ್ಮೀ ಲೇಔಟ್ ಭಾಗದಲ್ಲಿ ಕೈಗೊಂಡ ಪ್ರಚಾರ ಕಾರ್ಯದಲ್ಲಿ ಮಾಧ್ಯ,ಮಕ್ಕೆ ಹೇಳಿಕೆ ನೀಡಿದ ಅವರು, ಸದಾನಂದಗೌಡರನ್ನು ನಕಲಿ ಶಾಮನಿಗೆ ಹೋಲಿಸಿ ಹೇಳಿಕೆ ನೀಡಿದರು.