ಮುಸ್ಲಿಂರ ಮದುವೆ ಕಾರ್ಡ್ ನಲ್ಲಿ ಹಿಂದೂ ದೇವರ ಚಿತ್ರಗಳು.!
ಮುಸ್ಲಿಂರ ಮದುವೆ ಕಾರ್ಡ್ ನಲ್ಲಿ ಹಿಂದೂ ದೇವರ ಚಿತ್ರಗಳು
ಅಯೋಧ್ಯ ಅಂತಿಮ ತೀರ್ಪು ನಂತರ ಅಯೋಧ್ಯದಲ್ಲಿ ರಾಮ ನಾಮ ಸ್ಮರಣೆ ಜಾಸ್ತಿಯಾಗುತ್ತಿದೆ. ಅಲ್ಲದೆ ಹಿಂದೂ-ಮುಸ್ಲಿಂ ಎಲ್ಲಾ ಒಂದೇ ಅನ್ನೋ ಭಾವನೆ ಪಸರಿಸುತ್ತಿರುವಾಗಲೇ, ಮುಸ್ಲಿಂ ಕುಟುಂಬವೊಂದು ಮಗನ ಮದುವೆಗಾಗಿ ಪ್ರಿಂಟ್ ಮಾಡಿಸಲಾದ ಮದುವೆ ಕಾರ್ಡ್ ನಲ್ಲಿ ಹಿಂದೂ ದೇವರ ಭಾವಚಿತ್ರಗಳನ್ನು ಹಾಕುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದೆ.
ಮುಸ್ಲಿಂರು ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹಿಂದೂ ದೇವತೆಗಳಾದ ಹನುಮ, ಶಿವ, ಬ್ರಹ್ಮ, ವಿಷ್ಣು ಮತ್ತು ನಾರದ ಮುನಿಯ ಚಿತ್ರಗಳನ್ನು ಹಾಕಿದ್ದಾರೆ. ಈ ಆಮಂತ್ರಣ ಪತ್ರಿಕೆ 2020 ರ ಕ್ಯಾಲೆಂಡರ್ ರೀತಿಯಲ್ಲಿದೆ.
ಇಲ್ಲಿನ ಚರೇರಾ ಗ್ರಾಮದ ಮಬೀನ್ ಎಂಬುವರು ಅಲ್ಲಾನ ಜೊತೆ ದೇವಾನು ದೇವತೆಗಳ ಮೇಲೆ ನಂಬಿಕೆ ಇದೆ ಆ ಕಾರಣಕ್ಕೆ ಈ ರೀತಿ ಪ್ರಕಟಿಸಿದ್ದೇವೆ ಯಾರದೇ ಒತ್ತಡಕ್ಕೆ ನಾವು ಆಮಂತ್ರಣದಲ್ಲಿ ಹಿಂದೂ ದೇವರ ಚಿತ್ರಗಳು ಹಾಕಿಲ್ಲ.
ನಮ್ಮ ನಂಬಿಕೆ ಅನುಸಾರ ನಾವು ದೇವರ ಚಿತ್ರಗಳನ್ನು ಆಮಂತ್ರಣದಲ್ಲಿ ಮುದ್ರಿಸಿದ್ದೇವೆ ಎಂದು ಸ್ಪಷ್ಟ ಪಡಿಸಿದ್ದಾರೆ ಎನ್ನಲಾಗಿದೆ. ಎನಿವೇ ಹಿಂದೂ-ಮುಸ್ಲಿಂ ಭಾವೈಕ್ಯತೆ ಮೂಡಿಸಲು ಮುಂದಾದ ಕುಟುಂಬಕ್ಕೆ ನಾಗರಿಕರಿಂದ ಅಭಿನಂದನೆ ವ್ಯಕ್ತವಾಗುತ್ತಿದೆ.