ಪ್ರಮುಖ ಸುದ್ದಿ
ಕುಮಟಳ್ಳಿ ಓರ್ವ ಮಳ್ಳ – ಲಕ್ಷ್ಮೀ ಹೆಬ್ಬಾಳಕರ್
ಅಥಣಿಃ ಮಹೇಶ ಕುಮಟಳ್ಳಿ 2013 ಮತ್ತು 2018 ರಲ್ಲಿ ಟಿಕೆಟ್ ಕೊಡಿಸಲು ನಾನು ಸಹ ಸಹಾಯ ಮಾಡಿದ್ದೆ. ಆದರೆ ಇವತ್ತು ಶಾಸಕರಾಗಿ ಆಯ್ಕೆಯಾದ ನಂತರ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಕಲಿಯುಗದಲ್ಲಿ ಹಾಲು ಕುಡಿದ ಮಕ್ಕಳೇ ಬದುಕಲ್ಲ. ಇನ್ನೂ ವಿಷ ಕುಡಿದವರು ಬದುಕುತ್ತಾರ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಕುಮಟಳ್ಳಿ ವಿರುದ್ಧ ವಾಗ್ದಾಳಿ ನಡೆಸಿದರು.
ಕ್ಷೇತ್ರದ ಕಕಮರಿ ಗ್ರಾಮದಲ್ಲಿ ನಿನ್ನೆ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಮಹೇಶ ಕುಮಟಳ್ಳಿ ಓರ್ವ ಮಳ್ಳ ಇದ್ದಂತೆ. ಮಳ್ಳಿ ಮಳ್ಳಿ ಮಂಚಕ್ಕೆ ಕಾಲೆಷ್ಟು ಅಂದ್ರೆ ಮೂರು ಮತ್ತೊಂದು ಎಂದಿದ್ದರಂತೆ ಕುಮಟಳ್ಳಿ ಒಬ್ಬ ಮಳ್ಳನಂತೆ ನಾಟಕ ಮಾಡುವಾತ. ತಾಯಿಯಂತೆ ಇದ್ದ ಕಾಂಗ್ರೆಸ್ ಪಕ್ಷವನ್ನೆ ಒದ್ದು ಬಂದ ಇಂತಹ ವ್ಯಕ್ತಿಗೆ ಮತ ಹಾಕ್ತೀರಿ ನೀವೇ ಯೋಚಿಸಿ ಎಂದರು.