ಕ್ಷೇತ್ರದ ಅಭಿವೃದ್ಧಿಗೆ ಪೂರ್ಣ ಸಹಕಾರ-ಯಡಿಯೂರಪ್ಪ
ಬೆಂಗಳೂರ: ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ, ಮೊದಲು ಬಡವರಿಗೆ ಮನೆ ಕಟ್ಟಿಸಿಕೊಡಿ ಎಂದು ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರಂತೆ.
ಶನಿವಾರ ಇಲ್ಲಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಪರ ಪ್ರಚಾರ ನಡೆಸಿದ ಸಿಎಂ ಬಿಎಸ್ ಯಡಿಯೂರಪ್ಪ ನಂತರ ಸುದ್ದಿಗಾರರ ಜೊತೆ ಮಾತನಾಡಿ ಈ ವಿಷಯ ತಿಳಿಸಿದರು.
ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಕೈಗೊಳ್ಳಬೇಕಿದೆ. ಬಡವರ ಎಲ್ಲಾ ಕಷ್ಟವನ್ನು ಪರಿಹಾರ ಮಾಡುವ ಪಣ ತೊಟ್ಟಿದ್ದೇವೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಿದ್ದೇನೆ. ನಂಬಿದವರಿಗೆ ನಾವು ಮೋಸ ಮಾಡಲ್ಲ, ಮೈತ್ರಿ ಸರ್ಕಾರ ಅಭೀವೃದ್ಧಿ ಕಾರ್ಯಕೈಗೊಳ್ಳುವಲ್ಲಿ ವಿಫಲವಾಗಿದೆ. ಕ್ಷೇತ್ರದ ಜನರ ಆಸೆಯಂತೆ ಕೆಲಸ ಮಾಡಲು ಮೈತ್ರಿ ಸರ್ಕಾರ ಅನಕೂಲ ಕಲ್ಪಿಸದ ಕಾರಣ ಶಾಸಕರು ರಾಜೀನಾಮೆ ನೀಡಿದ್ದಾರೆ.
ಆದ್ದರಿಂದಲೇ ಮತ್ತೆ ನಾನು ಸಿಎಂ ಆಗುವ ಭಾಗ್ಯ ದೊರೆತಿರುವದು. ಈ ಕ್ಷೇತ್ರದಲ್ಲಿ ಅಭಿವೃದ್ದಿ ಆಗಬೇಕು. ಜನರಿಗೆ ಮೋಸ ಮಾಡಲ್ಲ ಎಂದರು. ಕ್ಷೇತ್ರದಲ್ಲಿ ಗೋಪಾಲಯ್ಯ ಗೆಲುವು ಖಚಿತ ಇದಕ್ಕೆ ಎಲ್ಲರ ಸಹಕಾರ ಸಹಮತವಿದೆ ಎಂದರು.