ಪ್ರಮುಖ ಸುದ್ದಿ
ಗಡ್ಡ ಬಿಡುವುದು ಹಿಂದೂ ಸಂಸ್ಕೃತಿ ಎಂದ್ದಿದ್ದೇಕೆ.? ಶ್ರೀರಾಮುಲು ಗೊತ್ತಾ.?
ಗಡ್ಡ ಬಿಡುವ ಸಂಪ್ರದಾಯ ಕುರಿತು ಧಾರ್ಮಿಕ ಪಾಠ ಮಾಡಿದ ಶ್ರೀರಾಮುಲು
ಹೊಸಪೇಟೆಃ ಉಪ ಚುನಾವಣೆ ಪ್ರಚಾರ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಶ್ರೀರಾಮುಲು ಅವರು ಗಡ್ಡ ಬಿಟ್ಟು ಸನ್ಯಾಸ ದೀಕ್ಷೆ ಪಡೆದುಕೊಂಡಿದ್ದಾರೆ ಎಂದು ಹೇಳಿಕೆಗೆ ತಿರುಗೇಟು ನೀಡಿದ ಶ್ರೀರಾಮುಲು, ಗಡ್ಡ ಬಿಡುವುದು ಹಿಂದೂ ಧರ್ಮದ ಸಂಸ್ಕೃತಿ, ಹಿಂದೆ ಋಷಿಮುನಿಗಳು ತಪ್ಪಸ್ಸು ಮಾಡುವಾಗ ಗಡ್ಡ ಬಿಡುತ್ತಿದ್ದರು.
ಅವರಲ್ಲಿರುವ ಸಾತ್ವಿಕತೆಯನ್ನು ಅದು ತೋರ್ಪಡಿಸುತಿತ್ತು. ಧ್ಯಾನ, ತಪಸ್ಸು ಮಾಡುವ ಅತಿ ಕಠಿಣ ಕಾರ್ಯವನ್ನು ಅವರು ಭಕ್ತರ ಉದ್ಧಾರಕ್ಕಾಗಿ, ಕಷ್ಟವೆಂದು ಬಂದ ಭಕ್ತರ ಸಮಸ್ಯೆ ಪರಿಹಾರಕ್ಕಾಗಿ ಕೈಗೊಳ್ಳುತ್ತಿದ್ದಾರೆ.
ತಮ್ಮ ಆತ್ಮ ಬಲ, ಪ್ರಾರ್ಥನ ಶಕ್ತಿಯಿಂದ ಭಕ್ತರನ್ನು ಉದ್ಧರಿಸುತ್ತಿದ್ದರು. ತಪಸ್ವಿಗಳ ಸೂಚನೆಯಂತೆ ಭಕ್ತರು ನಡೆಯುವ ಮೂಲಕ ಉತ್ತಮ ದಾರಿಯನ್ನು ಕಂಡುಕೊಳ್ಳುತ್ತಿದ್ದರು ಎಂದು ಸುದ್ದಿಗಾರರಿಗೆ ತಿಳಿಸಿದರು.