ಪ್ರಮುಖ ಸುದ್ದಿ
ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ಲಾಭಿ ಮಾಡಿಲ್ಲ – ಡಿಕೆಶಿ
ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ಲಾಭಿ ಮಾಡಿಲ್ಲ – ಡಿಕೆಶಿ
ಬೆಂಗಳೂರಃ ಉಪ ಚುನಾವಣೆ ವೇಳೆ ಕಾಂಗ್ರೆಸ್ ಸೋಲಿಗೆ ಕೇವಲ ಸಿಪಿಎಲ್ ನಾಯಕ ಸಿದ್ರಾಮಯ್ಯ ಮತ್ತು ಅಧ್ಯಕ್ಷ ದಿನೇಶ ಮಾತ್ರ ಕಾರಣರಲ್ಲ ಎಲ್ಲರ ಹೊಣೆ ಅದರಲ್ಲಿದೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ ತಿಳಿಸಿದರು.
ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ನಾನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಲು ಯಾವುದೇ ಲಾಭಿ ನಡೆಸಿಲ್ಲ ಲಾಭಿ ನಡೆಸುವ ಅವಶ್ಯಕತೆಯು ನನಗಿಲ್ಲ ಎಂದರು.
ಉಪ ಚುನಾವಣೆ ಸೋಲಿನಿಂದ ಸಿದ್ರಾಮಯ್ಯ ಹಾಗೂ ದಿನೇಶ ರಾಜೀನಾಮೆ ನೀಡಿರಬಹುದು, ಆದರೆ ವಾಪಸ್ ಪಡೆಯುವಂತೆ ನಾವೆಲ್ಲ ಮನವೊಲಿಸುತ್ತಿದ್ದೇವೆ ಎಂದು ವಿವರಿಸಿದರು.