ಕುದುರೆ ಮಾನವೀಯ ಘಟನೆಗೆ ಮರುಗಿದ ಜನತೆ
HORSE ಹಾರ್ಟ್ TOUCHING ಘಟನೆ
ಕುದುರೆ ಸಾವು ದುಃಖಿಸಿದ ಸಂಗಾತಿ ಕುದುರೆ
ಯಾದಗಿರಿ,ಶಹಾಪುರಃ ತನ್ನ ಸಂಗಾತಿಯನ್ನು ಕಳೆದುಕೊಂಡಿದ್ದಕ್ಕೆ ಆಹೋರಾತ್ರಿ ಮೃತ ಕುದುರೆ ಹತ್ತಿರದಲ್ಲೆ ನಿಂತು ದುಃಖ ಪಡುತ್ತಿರುವ ಮತ್ತೊಂದು ಕುದುರೆಯ ಮಾನವೀಯ ಘಟನೆ ತಾಲೂಕಿನ ಹುಲಕಲ್ ಸಮೀಪದಲ್ಲಿ ಶನಿವಾರ ಜರುಗಿದೆ.
ಜೋಡಿಯಾಗಿ ರಸ್ತೆ ಮೇಲೆ ಹೊರಟಿದ್ದ ಕುದುರೆಗಳು ಆಕಸ್ಮಿಕವಾಗಿ ಅಪಘಾತದಲ್ಲಿ ಒಂದು ಕುದುರೆ ಸಾವನ್ನಪ್ಪಿದೆ ಎನ್ನಲಾಗಿದೆ. ಆಗ ಜೊತೆಗಿದ್ದ ಇನ್ನೊಂದು ಕುದುರೆ ತನ್ನ ಸಂಗಾತಿ ಕುದುರೆ ಮೃತಪಟ್ಟಿರುವದನ್ನು ಕಂಡು ರೋಧಿಸುತ್ತಾ ಪಕ್ಕದಲ್ಲಿಯೇ ಆಹೋರಾತ್ರಿ ನಿಂತು ರೋಧಿಸುತ್ತಿರುವದನ್ನು ಕಂಡು ಜನರು ಮರುಗಿದ್ದಾರೆ. ಅಲ್ಲದೆ ನಿಂತ ಕುದುರೆಯನ್ನು ಜನರು ಓಡಿಸಲು ಪ್ರಯತ್ನಿಸಿದರು ಅದು ಜಾಗ ಬಿಟ್ಟು ಕದಲದಿರುವದನ್ನು ಕಂಡ ಜನರ ಕಣ್ಣಾಲಿಗಳು ತುಂಬಿ ಬಂದ ಘಟನೆಯು ನಡೆಯಿತು.
ರಾತ್ರಿ ಇಡಿ ಮೃತ ಪಟ್ಟ ಕುದುರೆ ಪಕ್ಕದಲ್ಲಿಯೇ ನಿಂತ ಸಂಗಾತಿ ಕುದುರೆಯನ್ನು ಕಂಡ ಜನರು ಮರುಗಿದ್ದಾರೆ. ಮನುಷ್ಯರಲ್ಲಿರಬೇಕಾದ ಮಾನವೀಯತೆ ಪ್ರಸ್ತುತ ಕಾಲದಲ್ಲಿ ಹಾಳಾಗಿದ್ದು, ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಆದರೆ ಪ್ರಾಣಿ, ಪಕ್ಷಿಗಳಲ್ಲಿ ಸಂಬಂಧ ಮಾನವೀಯತೆ ಗಟ್ಟಿಯಾಗಿ ಉಳಿದಿದೆ ಎನ್ನುವದಕ್ಕೆ ಇದೇ ಸಾಕ್ಷಿ ಎನ್ನಬಹುದು ಎಂದು ಸಾರ್ವಜನಿಕರು ತಮ್ಮ ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಿದ್ದರು.
ಮರುದಿನ ಕುದುರೆಗಳನ್ನು ಹುಡುಕುತ್ತಾ ಸ್ಥಳಕ್ಕೆ ಬಂದ ಕುದುರೆ ಮಾಲೀಕರು ಮೃತ ಕುದುರೆ ಸಮೇತ ರೋಧಿಸುತ್ತಿರುವ ಇನ್ನೊಂದು ಕುದುರೆಯನ್ನು ಕರೆದೊಯ್ದರು ಎನ್ನಲಾಗಿದೆ.
ತನ್ನ ಸಂಗಾತಿ ಅಪಘಾತದಲ್ಲಿ ಮೃತಪಟ್ಟಿರುವದನ್ನು ಕಂಡು ಇನ್ನೊಂದು ಕುದುರೆ ರೋಧಿಸುತ್ತಾ ನಿಂತಿರುವದನ್ನು ನೋಡಿದರೆ, ಅಯ್ಯೋಪಾಪಾ ಅನ್ನಿಸದೆ ಇರಲಾರದು. ಮಾನವೀಯ ಸಂಬಂಧ ಹಾಳಾಗುತ್ತಿರುವ ಪ್ರಸ್ತುತ ಕಾಲದಲ್ಲಿ ಪ್ರಾಣಿಗಳಲ್ಲಿ ಇಷ್ಟೊಂದು ಗಟ್ಟಿಯಾದ ಸಂಬಂಧ ನೋಡಿದರೆ ನಿಜಕ್ಕೂ ಮಾನವಕುಲಕ್ಕೆ ನಾಚಿಕೆಯಾಗಬೇಕು.
-ದೇವರಾಜ ನಾಯಕ. ಯಾದಗಿರಿ ಸಾರಿಗೆ ಇಲಾಖೆ ಅಧಿಕಾರಿ. ಪ್ರಯಾಣಿಕ.