ಪ್ರಮುಖ ಸುದ್ದಿ
ಪೇಜಾವರ ಶ್ರೀಗಳು ಶೀಘ್ರ ಗುಣಮುಖರಾಗಲಿ-ಆಂದೋಲಾ ಶ್ರೀ
ಉಡುಪಿ ಪೇಜಾವರ ಶ್ರೀ ಆಸ್ಪತ್ರೆಗೆ ದಾಖಲು
ಉಡುಪಿಃ ಉಸಿರಾಟ ತೊಂದರೆ ಅನುಭವಿಸುತ್ತಿದ್ದ ಉಡುಪಿ ಪೇಜಾವರ ಶ್ರೀಗಳು ಸೂಕ್ತ ಚಿಕಿತ್ಸೆಗಾಗಿ ಇಲ್ಲಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.
85 -89 ವಯಸ್ಸಿನವರಾದ ಪೇಜಾವರ ಶ್ರೀಗಳು ಆರೋಗ್ಯಯುತವಾಗಿಯೇ ಇದ್ದರು, ಆದರೆ ಇಚೆಗೆ ಉಸಿರಾಟ ತೊಂದರೆ ಅನುಭವಿಸುತ್ತಿದ್ದರು ಎನ್ನಲಾಗಿದೆ.
ಇಂದು ತೀವ್ರತೆ ಹೆಚ್ಚಾದಾಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶೀಘ್ರ ಗುಣಮುಖರಾಗಲಿಃ ಆಂದೋಲಾ ಶ್ರೀ
ಉಡುಪಿ ಪೇಜಾವರ ಶ್ರೀಗಳು ಆರೋಗ್ಯದಲ್ಲಿ ಏರು ಪೇರಾಗಿರುವ ಹಿನ್ನೆಲೆ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದೇಶದ ಅಖಂಡತೆಗೆ ಅಭಿವೃದ್ಧಿಗೆ ಪೇಜಾವರ ಶ್ರೀಗಳ ಅಭಿಮತ, ಮಾರ್ಗದರ್ಶನ ಅಗತ್ಯವಿದ್ದು, ಇನ್ನೂ ಅವರ ನೇತೃತ್ವದಲ್ಲಿ ಸಾಕಷ್ಟು ಮಹತ್ವದ ಕಾರ್ಯಗಳು ನಡೆಯಬೇಕಿದೆ.
ದೇವರು ಅವರನ್ನು ಶೀಘ್ರಗುಣಮುಖರನ್ನಾಗಿ ಮಾಡಲಿ ಎಂದು ಪ್ರಾರ್ಥಿಸುವೆ ಎಂದು ವಿನಯವಾಣಿಗೆ ತಿಳಿಸಿದ್ದಾರೆ.