ಸಾಹಿತಿ ಕರದಳ್ಳಿ ಅವರಿಗೆ ನುಡಿ ನಮನ ಸಲ್ಲಿಸಿದ ಡಿಸಿ ಕೂರ್ಮಾರಾವ್
ಕರದಳ್ಳಿಯವರ ಅಂತಿಮ ದರ್ಶನಕ್ಕೆ ಆಗಮಿಸಿದ ಡಿಸಿ
ಯಾದಗಿರಿಃ ಸಾಹಿತಿ ಚಂದ್ರಕಾಂತ ಕರದಳ್ಳಿ ಅವರು ಮಕ್ಕಳ ಸಾಹಿತ್ಯದ ಬಗ್ಗೆ ಸಾಕಷ್ಟು ಕೃಷಿ ಮಾಡಿದ್ದಾರೆ ಮತ್ತು ಶೈಕ್ಷಣಿಕವಾಗಿ ಅವರು ಉತ್ತಮ ಜ್ಞಾನವುಳ್ಳರಾಗಿದ್ದಾರೆ ಅವರನ್ನು ಕಾಣಬೇಕೆಂಬ ಹಂಬಲದಲ್ಲಿದ್ದೆ ಅಷ್ಟರಲ್ಲಿ ಈ ಘಟನೆ ನಡೆದು ಹೋಗಿರುವದು ನೋವೆನಿಸಿತು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದರು.
ಇಂದು ಜಿಲ್ಲೆಯ ಶಹಾಪುರದಲ್ಲಿ ಸಾಹಿತಿ ಚಂದ್ರಕಾಂತ ಕರದಳ್ಳಿಯವರ ಅಂತಿಮ ದರ್ಶನ ಪಡೆದು, ನಂತರ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಿನ್ನೆ ಹಠಾತ್ತನೆ ಸಾಹಿತಿ ಕರದಳ್ಳಿ ಅವರು ಹೃದಯಘಾತದಿಂದ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಕೇಳಿ ಬೇಸರ ತಂದಿದೆ. ಅವರ ಅಂತಿಮ ದರ್ಶನವಾದರೂ ಮಾಡಬೇಕು ಅಂದುಕೊಂಡು ಬಂದೆ. ಕರದಳ್ಳಿ ಅವರ ಅಗಲಿಕೆಯಿಂದ ಸಾಹಿತ್ಯ ವಲಯಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದರು.
ಶಾಸಕ ದರ್ಶನಾಪುರ, ಮಾಜಿ ಶಾಸಕ ವೀರಬಸವಂತರಡ್ಡಿ ಮುದ್ನಾಳ ಸೇರಿದಂತೆ ಕವಿ, ರಂಗಕರ್ಮಿ ಎಲ್.ಬಿ.ಕೆ.ಆಲ್ದಾಳ, ಕಸಾಪದ ಸಿದ್ಲಿಂಗಪ್ಪ ಆನೇಗುಂದಿ, ದೋರನಹಳ್ಳಿ ವೀರಮಹಾಂತ ಶಿವಾಚಾರ್ಯರು, ಸಾಹಿತಿಗಳಾದ ಈಶ್ವರ ಮಠ, ವಿಶ್ವರಾಧ್ಯ ಸತ್ಯಂಪೇಟೆ, ಗುರುಬಸಯ್ಯ ಗದ್ದುಗೆ, ರವಿ ಹಿರೇಮಠ, ಕಾರ್ಯನಿರತ ಪತ್ರಕರ್ತ ರ ಸಂಘದ ಅಧ್ಯಕ್ಷ ನಾರಾಯಣ ಸಗರ ನುಡಿ ನಮನ ಸಲ್ಲಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಹಾಸ್ಯ ಕಲಾವಿದ ಬಸವರಾಜ ಮಹಾಮನಿ, ಸುಧೀರ ಚಿಂಚೋಳಿ, ನೀಲಕಂಠ ಬಡಿಗೇರ, ಬಸವರಾಜ ಹಿರೇಮಠ, ಕೆಂಚಪ್ಪ ನಗನೂರ, ಗುರು ಮದ್ದೀನ್, ಗುಂಡಪ್ಪ ತುಂಬಗಿ, ಶಿವಶರಣಪ್ಪ ಕಲಬುರ್ಗಿ ಸ್ಥಳೀಯ ಮತ್ತು ಜಿಲ್ಲಾ ಪತ್ರಕರ್ತ ಮಿತ್ರರು ಸಾಹಿತ್ಯವಲಯದ ಪ್ರಮುಖರು ನಾಡಿನ ಹರಚರ ಗುರುವೃಂದ ಉಪಸ್ಥಿತರಿದ್ದರು.