ಪ್ರಮುಖ ಸುದ್ದಿ
ಅಮಿತಾಬ್ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಸ್ವೀಕಾರಕ್ಕೆ ಬರುತ್ತಿಲ್ಲ ಏಕೆ ಗೊತ್ತಾ.
ಅಮಿತಾಬ್ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಸ್ವೀಕಾರಕ್ಕೆ ಬರುತ್ತಿಲ್ಲ ಏಕೆ ಗೊತ್ತಾ.?
ನವದೆಹಲಿಃ ಇಂದು ರಾಷ್ಡ ರಾಜಧಾನಿ ದೆಹಲಿಯಲ್ಲಿ ಉಪ ರಾಷ್ಟ್ರಪತಿಯವರು ಪ್ರಸಕ್ತ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಗಳನ್ನು ಪ್ರಧಾನ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿಗೆ ಈ ಬಾರಿ ಭಾಜನರಾಗಿದ್ದ ಬಾಲಿವುಡ್ ಮೇರುನಟ ಅಮಿತಾಬ ಬಚ್ಚನ್ ಉಪ ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಬೇಕಿತ್ತು.
ಆದರೆ ಅಮಿತಾಬ್ ಬಚನ್ ಈ ಕಾರ್ಯಕ್ರಮಕ್ಕೆ ಆಮಿಸುತ್ತಿಲ್ಲ. ಕಾರಣ ಬಿಗ್ ಬಿಗೆ ಅವರು ಜ್ವರದಿಂದ ನರಳುತಿದ್ದಾರಂತೆ, ವೈದ್ಯರು ಪ್ರಯಾಣ ಮಾಡದಂತೆ ಸೂಚಿಸಿದ್ದಾರಂತೆ. ಈ ಕುರಿತು ಟ್ವಿಟರ್ ನಲ್ಲಿ ಅವರು ಬರೆದುಕೊಂಡಿದ್ದಾರೆ. ಜ್ವರದ ತೀವ್ರತೆ ಹೆಚ್ವಿರುವ ಕಾರಣ ಕಾರ್ಯಕ್ರಮಕ್ಕೆ ಆಗಮಿಸಲು ಆಗದಿರುವದಕ್ಕೆ ವಿಷಾಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.