KAS ಪಾಸ್ ಮಾಡಿದ ಮಡಿವಾಳ ಸಮುದಾಯದ ಯುವಕ
ಸಾಧಕ ಎಂ.ಮಲ್ಲಿಕಾರ್ಜುನ ಅವರಿಗೆ ಅಭಿನಂದನೆಗಳು
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು,ಕಲ್ಲಾಗು ಕಷ್ಟಗಳಿಗೆ ಮಳೆ ವಿಧಿಸುರಿಯೇ ,ಬೆಲ್ಲ ಸಕ್ಕರಿಯಾಗು ದೀನ ದುರ್ಬಲರಿಂಗೆ ಎಲ್ಲರೊಳಗೊಂದಾಗು ಮಂಕುತಿಮ್ಮ. ಎನ್ನುವ ಡಿ.ವಿ.ಜಿ.ಯವರ ನುಡಿಯಂತೆಯೇ ವ್ಯಕ್ತಿತ್ವವಿರುವ ಕೆ.ಎಂ.ಮಲ್ಲಿಕಾರ್ಜುನ್ ರು ದಿವಂಗತ ಶ್ರೀ ಯುತ ಕೃಷ್ಣಪ್ಪನವರು (ಎ.ಇ.ಓ)ಹಾಗೂ ನಿವೃತ್ತ ಪ್ರೌಢಶಾಲಾ ಶಿಕ್ಷಕಿ ಹಾಗೂ ಖ್ಯಾತ ಮಹಿಳಾ ಬಂಡಾಯ ಸಾಹಿತಿಗಳಾದ ಶ್ರೀಮತಿ ಅಂಜನಾ ಕೃಷ್ಣಪ್ಪನವರ ಮೂವರು ಮಕ್ಕಳಲ್ಲಿ ಏಕೈಕ ಸುಪುತ್ರರು.
ಬಾಲ್ಯದಿಂದಲೇ ಬಹಳ ಚುರುಕು ಬುದ್ಧಿಯ, ಹಾಸ್ಯಪ್ರಜ್ಞೆಯುಳ್ಳ ಮತ್ತು ಎಲ್ಲರ ಜೊತೆ ಸ್ನೇಹ ಪರತೆಯನ್ನು ಹೊಂದುವ ಗುಣವಂತ.
ಆದರೆ ವಿದ್ಯಾಭ್ಯಾಸದಲ್ಲಿ ಮಾತ್ರ ಶಿಸ್ತಿನ ಸಿಪಾಯಿಯಾಗಿದ್ದ ಇವರು ವಿಜ್ಞಾನ ವಿಷಯದಲ್ಲಿ ಪದವಿ ಪಡೆದು,ಡಿ ಇಡಿ ತರಬೇತಿ ಪಡೆದು ಸದ್ಯ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ನಂದಿಹಳ್ಳಿ ಗ್ರಾಮದ ಸರ್ಕಾರಿ ಆಶ್ರಮ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಬಾರಿ ಕೆಎಎಸ್ ಪರೀಕ್ಷೆಯಲ್ಲಿ ಮಡಿವಾಳ ಸಮುದಾಯದ 3 ಜನ ಪಾಸ್ ಆಗಿದ್ದಾರೆ. ಈ ಮೂಲಕ ಉನ್ನತ ಹುದ್ದೇಗೆರಿರುವದು ಸಮಾಜದಲ್ಲಿ ಸಂತಸ ತಂದಿದೆ. ಬಳ್ಳಾರಿ ಜಿಲ್ಕೆಯಿಂದ ಕೆ.ಎಂ.ಮಲ್ಲಿಕಾರ್ಜುನ ಅವರಾದರೆ, ರಾಯಚೂರ ಜಿಲ್ಲೆಯಿಂದ ಮಡಿವಾಳ ಸಮಾಜದ ಓರ್ವ ಯುವತಿ ಶ್ವೇತಾ ಶ್ರೀನಿವಾಸ ಕೆಎಎಸ್ ನಲ್ಲಿ ಪ್ರಥಮ ಸ್ಥಾನಪಡೆದು ಕಾರ್ಮಿಕ ಇಲಾಖೆಯ ಕಮಿಷನರ್ ಆಗಿ ನೇಮಕ ಹೊಂದಿದ್ದಾಳೆ.
ಅದೇ ರೀತಿ ಲಿಂಗಸೂಗುರ ತಾಲೂಕಿನ ನಮ್ಮದೆ ಸಮುದಾಯದ ಆನಂದ ಎಂಬ ಯುವಕ ಕಳೆದ ಎರಡು ಬಾರಿ ಕೆಎಎಸ್ ಪಾಸಾಗಿದ್ದ 1-5 ಆಯ್ಕೆಯಲ್ಲಿ ವಂಚನೆ ಮೂಲಕ ಹಿಂದುಳಿಯುತ್ತಿದ್ದಾನೆ. ಆರ್ಥಿಕತೆಯೇ ಆ ಹುಡುಗನ ದೌರ್ಬಲ್ಯ ಎಂದು ಹೇಳಲಾಗುತ್ತಿದೆ. ಸಮಾಜದ ಹಿರಿಯರು ಆತನಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ.
– ಮಲ್ಲಿಕಾರ್ಜುನ ಮುದನೂರ.
ಹಾಗೇ ಸಮಾಜ ಕಲ್ಯಾಣ ಇಲಾಖೆಯ ಎರಡು ಹಾಸ್ಟೆಲ್ ಗಳ ವ್ಯವಸ್ಥಾಕರಾಗಿ ಜವಾಬ್ದಾರಿಯನ್ನು ನಿಭಾಯಿಸುತ್ತಿರುವುದು ಇವರ ಜಾಣ್ಮೆಗೆ ಹಿಡಿದ ಕನ್ನಡಿ.
ಇಂತಹ ಜಾಣ್ಮೆಯ ವ್ಯಕ್ತಿತ್ವದ ಮಲ್ಲಿಕಾರ್ಜುನರು ಇಂದು ಕೆ.ಎ.ಎಸ್ ಪರೀಕ್ಷೆ ಪಾಸಾಗಿ, ತಾಪಂ ಕಾರ್ಯ ನಿರ್ವಾಹಕರಾಗಿ ಆಯ್ಕೆಯಾಗಿರುವುದು ನಮ್ಮ ಮಡಿವಾಳ ಸಮಾಜಕ್ಕೆ ಹೆಮ್ಮೆಯ ವಿಷಯ ಹಾಗೂ ಮಾದರಿಯಾಗಿದ್ದಾರೆ.
ಇವರ ಯಶಸ್ಸಿನ ಪಯಣ ಹೀಗೇ ಮುಂದುವರೆದು ತಮ್ಮ ಹೊಸ ಜವಾಬ್ದಾರಿಯಲ್ಲಿ ಯಶಸ್ವಿಯಾಗಿ ಇವರ ಜಾಣ್ಮೆಗೆ ಸರಿಹೊಂದುವ ಐ.ಎ.ಎಸ್. ಪರೀಕ್ಷೆಯ ಕಡೆ ಮುನ್ನುಗ್ಗಲೆಂಬುದು ನಮ್ಮೆಲ್ಲರ ಮಹದಾಸೆ ಹಾಗೂ ಆರೈಕೆಯಾಗಿದೆ.
ನಮ್ಮ ಮಡಿವಾಳ ಸಮಾಜದ ವಿದ್ಯಾವಂತ ನವ ಪೀಳಿಗೆ ಇವರ ಮಾರ್ಗದರ್ಶನ ಪಡೆದು, ಮಾದರಿಯಾಗಿರಿಸಿಕೊಂಡು ಸರ್ಕಾರಿ ಉದ್ಯೋಗ ಪಡೆದು ಯಶಸ್ಸಿನೆಡೆಗೆ ಸಾಗಲು ಅಣಿಯಾಗಲೆಂದು ಹಾರೈಸುವೆ.
–ಮಂಜುನಾಥ್ ನಂದಿಹಳ್ಳಿ.