ಬಯಲು ಹನುಮಾನ್ ಮಹಾತ್ಮೆಃ ದೇಗುಲಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಳ
ಬಯಲು ಹನುಮಾನ್ ಮಂದಿರದಲ್ಲಿ ದೀಪೋತ್ಸವ
ಮಂದಿರಕ್ಕೆ ಬರುವ ಭಕ್ತರ ಸಂಖ್ಯೆಯ ಹೆಚ್ಚಳ
ಯಾದಗಿರಿ,ಶಹಾಪುರಃ ನಗರದ ನಾಗರ ಕೆರೆ ದಡೆಯ ಬೆಟ್ಟದ ಮೇಲಿರುವ ಬಯಲು ಹನುಮಾನ್ ಮಂದಿರದಲ್ಲಿ ಭಕ್ತಾಧಿಗಳು ಶನಿವಾರ ನಿಮಿತ್ತ ಅದ್ಭುತ ಪೂಜೆ ನೆರವೇರಿಸಿದರು.
ಬಯಲು ಹನುಮಾನ್ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಈ ಕ್ಷೇತ್ರದಲ್ಲಿ ಬೇಡಿ ಬಂದ ಭಕ್ತರ ಆಸೆ ಬೇಡಿಕೆ ಈಡೇರಿಸುತ್ತಿರುವ ಕಾರಣ ಭಕ್ತಾಧಿಗಳು ಇಲ್ಲಿಗೆ ಬಂದ ತಮ್ಮ ಹರಕೆಯನ್ನು ತೀರಿಸುತ್ತಿದ್ದಾರೆ.
ವಿಳೇದ ಎಲೆ ಪೂಜೆ, ದೀಪೋತ್ಸವ ಸೇರಿದಂತೆ ಅಭಿಷೇಕ, ನೈವೇದ್ಯ ಫಲತಾಂಬುಲಗಳನ್ನು ಅರ್ಪಿಸಿ ಹರಕೆ ತೀರಿಸುತ್ತಿದ್ದಾರೆ. ಈಚೆಗೆ ಭಕ್ತರೊಬ್ಬರು ದೀಪೋತ್ಸವ ಪೂಜೆ ನಡೆಸಿಕೊಟ್ಟರು. ಸೀರಾ, ಅನ್ನ ಸಾಂಬಾರ ಪ್ರಸಾದ ವ್ಯವಸ್ಥೆ ಕಲ್ಪಿಸಿದ್ದರು.
ದೂರದ ಊರುಗಳಿಂದ ಭಕ್ತರು ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಹೊರ ರಾಜ್ಯದಿಂದ ಭಕ್ತರೊಬ್ಬರ ಕನಸಿನಲ್ಲಿ ಬಂದ ಬಯಲು ಹನುಮಾನ್ ದೇವರನ್ನು ಹುಡುಕುತ್ತಾ ಇಲ್ಲಿಗೆ ಬಂದು ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಸಂಜೆವರೆಗೂ ದೇವರ ಪ್ರದೇಶದಲ್ಲಿಯೇ ಕಾಲ ಕಳೆದು ಹೋದ ಘಟನೆಯು ನಡೆದಿದೆ ಎಂದು ಇಲ್ಲಿನ ಭಕ್ತರಾದ ರಾಮು ತಹಸೀಲ್, ಶರಣು ಹೂಗಾರ ಇತರರು ತಿಳಿಸುತ್ತಾರೆ.
ಹನುಮಾನ್ ಮಂದಿರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮುಂದೆ ಪ್ರಾಂಗಣ ನೆರಳಿನ ವ್ಯವಸ್ಥೆ ಇದೆ. ಗುಡಿ ಮುಂದೆ ಬಾವಿ ಸಹ ಇದೆ. ನಾಗರ ಕೆರೆ ದಿಬ್ಬಣದ ಮೇಲಿಂದ ದಕ್ಷಿಣ ದಿಕ್ಕಿನ ಕಡೆ ಹೋದರೆ ಬೆಟ್ಟದ ಮೇಲೆ ಸಿಡಿ ಹತ್ತಿದ ಮೇಲೇರಿದರೆ ಬಯಲು ಹನುಮಾನ್ ದರ್ಶನ ಮಾಡಬಹುದು. ಇದು ಬಹು ಪುರಾತನ ಕಾಲದ ಬಯಲಲ್ಲೇ ಇರುವ ಆನೆ ಆಕಾರದ ಬಂಡೆಯಲ್ಲಿ ಹನುಮಂತ ಮೂಡಿರುವದು ಕಾಣಬಹುದು. ಈಗ ನಿತ್ಯ ಪೂಜೆ ವಿಶೇಷ ಸಂದರ್ಭದಲ್ಲಿ ಪ್ರಸಾದ ವ್ಯವಸ್ಥೆಯು ಇಲ್ಲಿರುತ್ತದೆ.