ಸೈನಿಕ ಮತ್ತು ರೈತನ ಕುಟುಂಬ ಸಮೃದ್ಧಿಗೆ ಪ್ರಾರ್ಥಿಸಿ- ಕಲ್ಲಯ್ಯಜ್ಜ
ಶಹಾಪುರ ಸಗರನಾಡು ಉತ್ಸವ
ಯಾದಗಿರಿ, ಶಹಾಪುರಃ ದೇಶದ ಗಡಿಯಲ್ಲಿ ಮಳೆ, ಬಿಸಿಲು, ಚಳಿ ಎನ್ನದೆ ತಾಯಿ ನಾಡು, ನಮ್ಮಲ್ಲೆರ ರಕ್ಷಣೆಯಲ್ಲಿ ತನ್ನತನವನ್ನು ಒತ್ತೆ ಇಟ್ಟು ಕೆಲಸ ಮಾಡುತ್ತಿರುವ ಸೈನಿಕ ಮತ್ತು ದೇಶಕ್ಕೆ ಅನ್ನ ನೀಡುವ ಅನ್ನದಾತ ರೈತರ ಕುಟುಂಬದ ಸಮೃದ್ಧಿಗೆ ಏಳ್ಗೆಗೆ ಸರ್ವರೂ ಪ್ರಾರ್ಥಿಸಿಬೇಕು ಎಂದು ಗದುಗಿನ ಕಲ್ಲಯ್ಯಜ್ಜ ಕರೆ ನೀಡಿದರು.
ಸೋಮವಾರ ಚರಬಸವೇಶ್ವರ ಗದ್ದುಗೆ ಆವರಣದಲ್ಲಿ ಸಗರನಾಡು ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ವಿದ್ಯೆಗಿಂತ ಸಂಸ್ಕಾರ ಕಲಿಸುವದು ಬಹುಮುಖ್ಯವಾಗಿದೆ. ಪ್ರಸ್ತುತ ಕಾಲ ಭಾರತೀಯ ಸಂಸ್ಕøತಿ ಆಚರಣೆ ಎಂದರೆ ಮೂಗು ಮುರಿಯುವ ಯುವಕ ಯುವತಿಯರೇ ಜಾಸ್ತಿಯಾಗುತ್ತಿದ್ದಾರೆ. ಇಂಗ್ಲೀಷ್ ವ್ಯಾಮೋಹಕ್ಕೆ ಬಿದ್ದು, ನಮ್ಮತನವನ್ನು ಕಳೆದುಕೊಂಡು ಸುಸಂಸ್ಕøತ ಮರೆತು ವಿದೇಶ ಸಂಸ್ಕøತಿಗೆ ಜೋತು ಬಿದ್ದು ಬದುಕು ಹಾಳು ಮಡಿಕೊಳ್ಳುತ್ತಿದ್ದಾರೆ ಎಂದು ವಿಷಾಧಿಸಿದರು.
ಹೀಗಾಗಿ ಮಕ್ಕಳಿಗೆ ಚಿಕ್ಕಂದಿನಿಂದಲೇ ಉತ್ತಮ ಸಂಸ್ಕಾರ ನೀಡಬೇಕು. ಆಧ್ಯಾತ್ಮ, ಗುರು ಹಿರಿಯರಿಗೆ ಗೌರವ, ಜ್ಞಾನಕ್ಕೆ ಪ್ರೋತ್ಸಾಹ ಸೇರಿದಂತೆ ಸ್ವಚ್ಛತೆ ಕುರಿತು ಬದುಕು ಜಂಜಾಟ ಇಲ್ಲದೆ ಒತ್ತಡದ ನಡುವೆಯು ಹೇಗೆ ಬದುಕಬೇಕು ಸಹ ಕುಟುಂಬದ ಪ್ರೀತಿ ಗೌರವಾಧಾರ ದೇಶ ಪ್ರೇಮ, ಈ ನೆಲದ ಸಂಸ್ಕೃತದ ಬಗ್ಗೆ, ಹೀಗೆ ಎಲ್ಲದರ ಬಗ್ಗೆ ಪ್ರೀತಿ ಬೆಳೆಸಬೇಕು. ಆ ನಿಟ್ಟಿನಲ್ಲಿ ಮಕ್ಕಳನ್ನು ಬೆಳೆಸಬೇಕು. ಸುಸಂಸ್ಕೃತ ಪ್ರಜೆಯಾಗಿ ಬಾಳುವಂತ ಶಕ್ತಿ ತುಂಬಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕಲ್ಲಯ್ಯಜ್ಜನವರ ತುಲಾಭಾರ ನೆರವೇರಿಸಲಾಯಿತು. ಗದ್ದುಗೆಯ ಬಸವಯ್ಯ ಶರಣರು ಸಾನ್ನಿಧ್ಯವಹಿಸಿದ್ದರು. ಕರವೇ ಉಕ ಅಧ್ಯಕ್ಷ ಶರಣು ಗದ್ದುಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಂಗ್ರೆಸ್ ಯುವ ನಾಯಕ ಬಾಪುಗೌಡ ದರ್ಶನಾಪುg, ಸಿಪಿಐ ಹನುಮರಡ್ಡೆಪ್ಪ, ವಾಸ್ತು ತಜ್ಞ ಎಂ.ಡಿ.ಪಾಟೀಲ್, ಹಿರಿಯ ಕಲಾವಿದ ವೈಜನಾಥ ಬಿರೆದಾರ, ಜಾನಪದ ಅಕಾಡೆಮಿ ಸದಸ್ಯ ಅಮರೀಶ ಜಾಲಿಬೆಂಚಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಾಮಿಡಿ ಕಲಾವಿದರು ವೀಕ್ಷಕರನ್ನು ನಗೆನಗಡಲ್ಲಿ ತೇಲಿಸಿದರು. ಜ್ಯೂನಿಯರ್ ಸಾಧು ಕೋಕಿಲ ಹಾಸ್ಯ ಗಮನ ಸೆಳೆಯಿತು. ನಂತರ ವಿವಿಧ ಸಂಸ್ಕøತಿ ಕಾರ್ಯಕ್ರಮಗಳು ಜರುಗಿದವು. ಮೊದಲಿಗೆ ಭರತನಾಟ್ಯದ ಮೂಲಕ ಪ್ರಾರ್ಥನೆ ನಡೆಯಿತು. ಇದೇ ಸಂದರ್ಭದಲ್ಲಿ ಹಲವು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.