ಶಹಾಪುರಃ ಹುಚ್ಚು ನಾಯಿ ಕಡಿತ 9 ಮಕ್ಕಳು ಆಸ್ಪತ್ರೆಗೆ, ಓರ್ವ ಕಲಬುರ್ಗಿಗೆ ರವಾನೆ
ಶಹಾಪುರಃ ಹುಚ್ಚು ನಾಯಿ ಕಡಿತ 9 ಮಕ್ಕಳು ಆಸ್ಪತ್ರೆಗೆ, ಓರ್ವ ಕಲಬುರ್ಗಿ ಆಸ್ಪತ್ರೆಗೆ ರವಾನೆ
ಯಾದಗಿರಿಃ ಜಿಲ್ಲೆಯ ಶಹಾಪುರದ ದಿಗ್ಗಿ ಬೇಸ್ ಪ್ರದೇಶದ ಬಡಾವಣೆಯಲ್ಲಿ ಬೆಳಗ್ಗೆ ಹುಚ್ಚುನಾಯಿಯೊಂದು 9 ಮಕ್ಕಳಿಗೆ ಕಡಿದ ಪರಿಣಾಮ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಮಕ್ಕಳು ಆಟವಾಡುತ್ತಿದ್ದ ವೇಳೆ ಹುಚ್ಷು ಹಿಡಿದ ನಾಯಿಯೊಂದು ಮಕ್ಕಳ ಮೇಲೆ ಎರಗಿದ್ದು ಸಾಕಷ್ಟು ಜನರಿಗೆ ಕಡಿದಿದೆ ಎನ್ನಲಾಗಿದೆ.
ದಿಗ್ಗಿ ಬೆಸ್ ದಿಂದ ಗಾಂಧಿಚೌಕ್ ಮಾರ್ಗ, ಮೋಚಿಗಡ್ಡಾದಿಂದ ಗಂಗಾ ನಗರ ಕಡೆ ನಾಯಿ ಸಿಕ್ಕ ಸಿಕ್ಕ ಮಕ್ಕಳನ್ನು ಕಚ್ಚುತ್ತಾ ಸಾಗಿದೆ ಎನ್ನಲಾಗಿದೆ.
9 ಮಕ್ಕಳಲ್ಲಿ ಅಮಿತ್ ಹಾಗೂ ಲೋಕೇಶ ಎಂಬ ಬಾಲಕರಿಬ್ಬರಿಗೆ ತೀವ್ರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಕಲಬುರ್ಗಿಯ ಖಾಸಗಿ ಆಸ್ಪತಗೆ ದಾಖಲು ಮಾಡಲಾಗಿದೆ ಎಂದು ಪಾಲಕರಲ್ಲಿ ಒಬ್ಬರಾದ ಬಸವರಾಜ ತಳವಾರ ತಿಳಿಸಿದ್ದಾರೆ.
ಮಕ್ಕಳಲ್ಲದೆ ಇನ್ನಿಬ್ಬರಿಗೂ ನಾಯಿ ಕಚ್ಚಿದೆ ಅವರು ಚಿಕಿತ್ಸೆಗೆ ಕಲಬುರ್ಗಿಗೆ ತೆರಳಿದ್ದಾರೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ನಗರದ ಸರ್ಕಾರಿ ಆಸ್ಪತ್ರೆ ಯಲ್ಲಿ ಒಟ್ಟು 9 ಜನ ಮಕ್ಕಳು ಚಿಕಿತ್ಸೆ ಪಡೆದಿದ್ದು, ಓರ್ವ ಬಾಲಕ ಮಾತ್ರ ಹೆಚ್ಚಿನ ಚಿಕಿತ್ಸೆಗೆ ಕಲಬುರ್ಗಿಗೆ ಕಳುಹಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯ ಡಾ.ಚಂದ್ರು ಚವ್ಹಾಣ ತಿಳಿಸಿದ್ದಾರೆ. ದುರಾದೃಷ್ಟ ಹುಚ್ಚು ಹಿಡಿದ ನಾಯಿ ಮಾತ್ರ ಮತ್ಯಾವ ಬಡಾವಣೆಯತ್ತ ತೆರಳಿದೆಯೋ ಗೊತ್ತಿಲ್ಲ. ನಗರದ ನಾಗರಿಕರು ಎಚ್ಚೆತ್ತುಕೊಂಡು ಹುಚ್ಚು ನಾಯಿ ಸಿಕ್ಕಲ್ಲಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಮುಖಂಡರು ಮನವಿ ಮಾಡಿದ್ದಾರೆ.
ಅಲ್ಲದೆ ನಗರಸಭೆ ಅಧಿಕಾರಿಗಳು ಕೂಡಲೇ ಹುಚ್ಚು ಹಿಡಿದು ತಿರುಗುತ್ತಿರುವ ನಾಯಿ ಹುಡುಕಿ ಕೊಲ್ಲಬೇಕೆಂದು ನಗರ ನಿವಾಸಿಗಳು ಆಗ್ರಹಿಸಿದ್ದಾರೆ.