ಕೌಟುಂಬಿಕ ಕಲಹಃ ಗಂಡ, ಪತ್ನಿ, ಮಗಳು ಬೆಂಕಿಗಾಹುತಿ
ಚಿತ್ರದುರ್ಗಃ ಕೌಟುಂಬಿಕ ಕಲಹದಿಂದ ಬೇಸತ್ತು ಗಂಡ, ಹೆಂಡತಿ ಮತ್ತು ಮಗಳು ಬೆಂಕಿ ಹೊತ್ತಿಸಿಕೊಂಡು ಸಾವನ್ನಪ್ಪಿದ ಘಟನೆ ಇಲ್ಲಿನ ಗಾರೆಹಟ್ಟಿ ಬಡಾವಣೆಯಲ್ಲಿ ನಡೆದಿದೆ.
ಪತಿ ಅರುಣ ಖಾಸಗಿ ಬಸ್ ಏಜಂಟ್ ನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಪತ್ನಿ ಲತಾ ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗೊ ಕಾರ್ಯನಿರ್ವಹಿಸುತ್ತಿದ್ದಳು ಎನ್ನಲಾಗಿದೆ.
ಅರುಣ್ ಹಾಗೂ ಲತಾ 14 ವರ್ಷಗಳ ಹಿಂದೆ ಮದುವೆಯಾಗಿದ್ದರು. ಸಾವಿಗೆ ಅರುಣ್ ಕುಮಾರಗೆ ಹೊಂದಿದ್ದ ಎನ್ನಲಾದ ಅನೈತಿಕ ಸಂಬಂಧವೇ ಮನೆಯಲ್ಲಿ ಆಗಾಗ ಪತ್ನಿ ಜೊತೆ ಜಗಳವಾಗುತಿತ್ತು ಎನ್ನಲಾಗಿದ್ದು,
ಹೀಗಾಗಿ ಗಲಾಟೆ ಆರಂಭವಾಗಿದ್ದು ತಾಳ್ಮೆ ಕಳೆದುಕೊಂಡ ಅರುಣ್ ಪತ್ನಿ ಸೇರಿದಂತೆ ಮಗಳಿಗೂ ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಲತಾ ಪೋಷಕರು ಆರೋಪಿಸಿದ್ದಾರೆ.
ಸುದ್ದಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿನಂದಿಸಿ ಮೃತದೇಹಗಳನ್ನು ಜೊರ ತೆಗೆದಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.