ಕಾಂಗ್ರೆಸ್ ನ ಬೇವಖೂಫ್ ಗಳ ಮಾತು ಕೇಳ್ತೀರಾ.? ಬಳ್ಳಾರಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ
ಕಾಂಗ್ರೆಸ್ ಬೇವಖೂಫ್ ಮಾತು ಕೇಳಿ ಸಿಎಎ ವಿರೋಧಿಸ್ತೀರಾ..? ಬಳ್ಳಾರಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ
ಬಳ್ಳಾರಿಃ ಕಾಂಗ್ರೆಸ್ ಪುಢಾರಿಗಳು ಆಸೆ ಇದ್ರೆ ಪಾಕ್ ಗೆ ಹೋಗಲಿ ಅದು ಬಿಟ್ಟು ದೇಶದಲ್ಲಿ ಹಿಂದೂಗಳ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಬೇಡಿ ಎಂದು ಶಾಸಕ ಸೋಮಶೇಖರ ರಡ್ಡಿ ಹೇಳಿದರು.
ನಗರದಲ್ಲಿ ಸಿಎಎ ಕಾಯ್ದೆ ಪರವಾಗಿ ಬಿಜೆಪಿ ಹಮ್ಮಿಕೊಂಡಿದ್ದ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದೂಗಳಾದ ನಾವು 80% ಆದ್ರೆ ಅವರು 17% ನಮ್ಮವರೇನಾದ್ರೂ ಖಡ್ಗ ಕೈಯಲಿಡಿದು ರಸ್ತೆಗಿಳಿದರೆ ಏನ್ ಗತಿ ಎಂಬುದನ್ನು ಊಹಿಸಿಕೊಳ್ಳಿ ಎಂದ ಅವರು,
ಇನ್ನೊಂದು ಹೆಜ್ಜೆ ಮುಂದೆ ಹೋಗಿ ನಿಮಗೇನ್ ಪಾಕ್, ಬಾಂಗ್ಲಾ ಹುಳ ಕಡಿತಿದೆಯೇ.? ತೇಜಸ್ವಿಸೂರ್ಯ ಅವರು ಹೇಳಿರುವದಲ್ಲಿ ನಿಜವಿದೆ. ಈ ಬೇವಖೂಬ್ ಕಾಂಗ್ರೆಸ್ ನವರ ಮಾತು ಕೇಳಿ ಏನು ತಿಳಿಯದ ಪಂಚರ್ ತಿಕ್ಕುವವರು ಹೋರಾಟಕ್ಕೆ ಇಳಿಯುತ್ತಿದ್ದಾರೆ.
ಇದು ನಮ್ಮ ದೇಶ ಇಲ್ಲಿ ನಾವ್ ಹೇಳಿದಂತೆ ಕೇಳ್ಕೊಂಡಿರಬೇಕು. ಇಲ್ಲಿ ಎಲ್ಲರೂ ಅಣ್ಣ ತಮ್ಮಂದಿರಂತೆ ಬಾಳುತ್ತಿದ್ದೇವೆ. ಪಾಕ್ ಮತ್ತು ಬಾಂಗ್ಲಾ, ಇಸ್ಲಾಮಬಾದ್ ನಲ್ಲಿ ವಾಸಿಸುವ ನಮ್ಮ ಹಿಂದೂಗಳ ಮೇಲೆ ದಬ್ಬಾಳಿಕೆ, ಅತ್ಯಾಚಾರ ನಡೆಸುತ್ತಿದ್ದಾರೆ ಅದರಿಂದ ನೊಂದ ನಮ್ಮ ಜನ ಭಾರತಕ್ಕೆ ಬಂದ್ರೆ ಕರ್ಕೊಬಾರ್ದ್ ಎಂದು ಆಕ್ರೋಶ ವ್ಯಕ್ತಪಡಿಸಿದರು.