ಪ್ರಮುಖ ಸುದ್ದಿ
CAA ಅರ್ಥವಾಗದಿದ್ರೆ ಇಟಲಿ ಭಾಷೆಗೆ ಭಾಷಾಂತರ ಮಾಡಿ ಕೊಡುವೆ- ರಾಹುಲ್ ಕಾಲೆಳೆದ ಅಮಿತ್ ಶಾ
CAA ಅರ್ಥವಾಗದಿದ್ರೆ ಇಟಲಿ ಭಾಷೆಗೆ ಭಾಷಾಂತರಿಸಿ ಕೊಡಲೇ.? ಅಮಿತ್ ಶಾ
ರಾಜಸ್ಥಾನಃ ಅರೆ ರಾಹುಲ್ ಬಾಬಾ ಸಿಎಎ ಸಮಜ್ ಮೇ ನಹಿ ಆಯಾತೋ ಬೋಲಿಯೇ ಇಟಲಿಯನ್ ಭಾಷೆ ಮೇ ಭಾಷಾಂತರ ಕರ್ ಕೇ ದೇಯೇಂಗೇ ಎಂದು ಅಮಿತ್ ಶಾ ಅವರು ತಮ್ಮದೇ ಶೈಲಿಯಲ್ಲಿ ಹೇಳಿದರು.
ಪೌರತ್ವ ತಿದ್ದುಪಡೆ ಕಾಯ್ದೆ (ಸಿಎಎ) ಬಗ್ಗೆ ಅರ್ಥ ವಾಗಲಿಲ್ಲ ಅಂದ್ರೆ ಹೇಳಿ ರಾಹುಲ್ ಬಾಬಾ ಅವರೇ ಅದನ್ನು ಇಟಲಿಯನ್ ಭಾಷೆಗೆ ಭಾಷಾಂತರ ಮಾಡಿ ಕೊಡುವೆ ಎಂದು ಅವರು ರಾಹುಲ್ ಗಾಂಧಿಯವರ ಕಾಲೆಳೆದಿದ್ದಾರೆ.
ಜೋಧಪುರ ನಗರದಲ್ಲಿ ಸಿಎಎ ಕುರಿತು ನಡೆದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಹುಲ್ ಗಾಂಧಿಯವರು ಮೊದಲು ಸಿಎಎ ಕುರಿತು ಓದಿ ನಂತರ ಚರ್ಚೆಗೆ ಬನ್ನಿ. ಒಂದು ವೇಳೆ ಓದಲಾಗದಿದ್ದರೆ ಇಟಲಿ ಭಾಷೆಗೆ ಭಾಷಾಂತರಿಸಿ ನಿಮಗೆ ಸಹಾಯ ಮಾಡುತ್ತೇವೆ ಎಂದು ಟೀಕಿಸಿದ್ದಾರೆ.