ಪ್ರಮುಖ ಸುದ್ದಿ

ಶಹಾಪುರಕ್ಕೆ ತಟ್ಟದ ಮುಷ್ಕರದ ಬಿಸಿ, ಅಲ್ಲಲ್ಲಿ ಮುಷ್ಕರ ಪ್ರತಿಭಟನೆ

ಯಥಾಸ್ಥಿತಿಯಲ್ಲಿ ಜನ ಜೀವನ, ಆಸ್ಪತ್ರೆ, ಅಂಗಡಿ, ಶಾಲಾ ಕಾಲೇಜು, ಬಸ್ ಸಂಚಾರ ಸುಗಮ

ಶಹಾಪುರದಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳಿಂದ ಧರಣಿ ಮನವಿ

ಶಹಾಪುರಃ ಬುಧವಾರ ಜ. 8 ರಂದು ದೇಶದ ವಿವಿಧ ಕಾರ್ಮಿಕ ಸಂಘಟನೆಗಳು ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೇಂದ್ರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಭಾರತ ಬಂದ್‍ಗೆ ಕರೆ ನೀಡಲಾಗಿತ್ತು.

ಅದರಂತೆ ಇಲ್ಲಿನ ವಿವಿಧ ಕಾರ್ಮಿಕ ಸಂಘಟನೆಗಳು ಮತ್ತು ರೈತ ಸಂಘಟನೆಗಳು ಹಲವಡೆ ಮುಷ್ಕರ, ಪ್ರತಿಭಟನೆ ನಡೆಸಿ ತಾಲೂಕು ಆಡಳಿತದ ಮೂಲಕ ಕೇಂದ್ರಕ್ಕೆ ಮನವಿ ಪತ್ರ ಸಲ್ಲಿಸುವ ಮೂಲಕ ಹೋರಾಟ ಮಾಡಿದರು.
ಭಾರತ್ ಬಂದ್ ಕರೆಗೆ ಇಲ್ಲಿನ ವ್ಯಾಪಾರ, ಅಂಗಡಿ ಶಾಲಾ ಕಾಲೇಜುಗಳು ಸೇರಿದಂತೆ ಆಸ್ಪತ್ರೆಗಳು ಬಸ್ ಸಂಚಾರ ಎಂದಿನಂತೆ ಸುಗಮವಾಗಿ ನಡೆದವು.

ಸಿಐಟಿಯುವತಿಯಿಂದ ಬೃಹತ್ ಪ್ರತಿಭಟನೆ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಭಾರತ ಬಂದ್‍ಗೆ ಕರೆ ನೀಡಿದ ಸಿಐಟಿಯು ಕಾರ್ಮಿಕ ಸಂಘಟನೆಗಳು ನಗರದಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳುವ ಮೂಲಕ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.

ಕಾರ್ಮಿಕರಿಗೆ ಕನಿಷ್ಟ ವೇತನ ಜಾರಿಗೊಳಿಸಬೇಕು. ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಮತ್ತು ಅಂಗನವಾಡಿ ಆಶಾ ಕಾರ್ಯಕರ್ತರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಗುತ್ತಿಗೆ ಕಾರ್ಮಿಕ ಪದ್ದತಿಯನ್ನು ಕೈಬಿಡಬೇಕು. ಖಾತ್ರಿ ಪಿಂಚಿಣಿ ಕಾಯ್ದೆಯನ್ನು ಅನುಷ್ಟಾನಗೊಳಿಸುವದು ಮತ್ತು ಮಹಿಳಾ ದೌರ್ಜನ್ಯ ತಡೆ ಸಮಿತಿ ರಚನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಪ್ರತಿಭಟನಾನಿರತರು ಆಗ್ರಹಿಸಿದರು.

ನಗರದ ಸಿಪಿಎಸ್ ಶಾಲಾ ಮೈದಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತದಲ್ಲಿ ಸಮಾರೋಪಗೊಂಡು, ಅರ್ಧ ತಾಸು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ನಂತರ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಜಗನ್ನಾಥರಡ್ಡಿ ಅವರಿಗೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಯ್ಯ ಪೋಲಂಪಲ್ಲಿ, ತಾಲೂಕಾ ಅಂಗನವಾಡಿ ಕಾರ್ಯಕರ್ತರ ನೌಕರರ ಅಧ್ಯಕ್ಷೆ ಬಸವಲಿಂಗಮ್ಮ ನಾಟೇಕಾರ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಹಣಮಂತಿ ಮೌರ್ಯ, ಸಿಐಟಿಯು ಮುಖಂಡರಾದ ಯಮನಮ್ಮ ದೋರನಳ್ಳಿ, ರಾಜೇಶ್ವರಿ ಶಿರವಾಳ, ಸುನಂದಾ ಹಿರೇಮಠ, ಮಲ್ಲಣ್ಣ ಬಿರೆದಾರ, ಈರಮ್ಮ ಹಯ್ಯಾಳ್ಕರ್, ಮಂಜುಳಾ ಹೊಸಮನಿ, ಸೋಪಣ್ಣ ಸಗರ, ಭೀಮರಾಯ ಕದರಾಪೂರ, ಮಹಾಂತಗೌಡ, ಮಲ್ಲಿಕಾರ್ಜುನ, ಅಮರಪ್ಪ ಮರ್ಧಾನೆಪ್ಪ ಸೇರಿದಂತೆ ಹಲವು ಮುಖಂಡರು ಕಾರ್ಮಿಕರು, ಬಂದ್ ಮಾಡದೆ ಕಾರ್ಮಿಕ ಸಂಘಟನೆಗಳು ಮುಷ್ಕರ ಮಾಡುವದರೊಂದಿಗೆ ಸಹಕರಿಸಿದರು.

ಎಂದಿನಂತೆ ಅಂಗಡಿ ಮುಗ್ಗಟ್ಟುಗಳು ಶಾಲಾ ಕಾಲೇಜುಗಳು ಬಸ್ ಸಂಚಾರ ಎಂದಿನಂತೆ ಕಾರ್ಯ ನಿರ್ವಹಿಸಿದವು. ಯಾವುದೆ ಅಹಿತಕರ ಘಟನೆ ನಡೆಯದಂತೆ ಶಹಾಪುರ ನಗರ ಠಾಣಾ ಸಿಪಿಐ ಹನುಮರೆಡೆಪ್ಪ ಹಾಗೂ ಪಿಎಸ್‍ಐ ಚಂದ್ರಕಾಂತ ಮ್ಯಾಕಲೆಯವರು ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button