2020 ಜನಾರ್ದನ ರಡ್ಡಿ ಇಸ್ವಿಯಂತೆ ಯಾಕೆ ಗೊತ್ತಾ.?
2020 ಜನಾರ್ದನ ರಡ್ಡಿ ಇಸ್ವಿಯಂತೆ ಯಾಕೆ ಗೊತ್ತಾ.?
ಬಸವಕಲ್ಯಾಣಃ 12 ವರ್ಷಗಳ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಇದೇ ಜನಾರ್ದನ ರಡ್ಡಿ ಕಾರಣ ಎಂಬುದು ರಾಜ್ಯದ ಜನತೆಗೆ ಗೊತ್ತಿರುವ ವಿಷಯ. ಇನ್ಮುಂದೆಯೂ ಇತಿಹಾಸ ಸೃಷ್ಟಿ ಯಾಗಲಿದೆ. ಶರಣರನಾಡು ಬಸವಕಲ್ಯಾಣದಿಂದಲೇ ಶೀಘ್ರದಲ್ಲಿ ಮಹತ್ವದ ಕಾರ್ಯ ಆರಂಭಿಸುವೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರಡ್ಡಿ ತಮ್ಮ ಹಿಂದಿನ ಶೈಲಿಯಂತೆ ಡೈಲಾಗ್ ಹೊಡೆದಿದ್ದಾರೆ.
ರವಿವಾರ ನಗರದಲ್ಲಿ ನಡೆದ ರಾಜ್ಯಮಟ್ಟದ ಯೋಗಿ ವೇಮನ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಹತ್ವದ ಕೊಡುಗೆ ನೀಡುವುದಾಗಿ ಘೋಷಿಸಿದ ಅವರು, ಕೃಷ್ಣಾ ನದಿ ದಂಡೆಯಲ್ಲಿ 300 ಎಕರೆ ಜಮೀನು ಖರೀದಿಸಿ ತಲಾ 100 ಅಡಿ ಎತ್ತರದ ಶಿವ, ವೇಮನ ಮತ್ತು ಹೇಮರಡ್ಡಿ ಮಲ್ಲಮ್ಮ ಅವರ ಪ್ರತಿಮೆ ಸ್ಥಾಪಿಸಲಾಗುವದು. ಅಲ್ಲದೆ ಶಿಕ್ಷಣ ಹಾಗೂ ದಾಸೋಹದ ವ್ಯವಸ್ಥೆ ಕಲ್ಪಿಸುವ ಮೂಲಕ ತುಮಕೂರಿನ ಸಿದ್ಧಗಂಗಾ ಮಠದ ಮಾದರಿಯಲ್ಲಿ ಬೆಳೆಸುವೆ ಎಂದು ಹೇಳುವ ಮೂಲಕ 2020 ರ ಇಸ್ವಿ ನನ್ನದಾಗಲಿದೆ ಎಂಬ ಮಾರ್ಮಿಕವಾಗಿ ತಿಳಿಸಿದ್ದಾರೆ.