ಸಜಿವ ಬಾಂಬ್ ಪತ್ತೆ ಮಾಡಿದ ಚತುರ ಶ್ವಾನದ ಹೆಸರೇನು ಗೊತ್ತಾ.?
ವಿವಿ ಡೆಸ್ಕ್ಃ ಮಂಗಳೂರ ವಿಮಾನ ನಿಲ್ದಾಣದಲ್ಲಿ ಅನಾಥ ಬ್ಯಾಗ್ ವೊಂದು ಬಿಟ್ಟು ಹೋಗಿರುವದನ್ನು ಗಮನಿಸಿದ ಅಲ್ಲಿನ ಸಿಬ್ಬಂದಿ ಬ್ಯಾಗ್ ನಲ್ಲಿ ಏನೋ ಇದೆ ಎಂಬುದನ್ನು ಅರಿತಿದ್ದು, ಸ್ಥಳಕ್ಕೆ ಸಿಐಎಎಸ್ಎಫ್ ಆಗಮಿಸಿದೆ.
ಸಂಶಯ ಬಂದ ಸಿಬ್ಬಂದಿ ತಕ್ಷಣ ಶ್ವಾನ ದಳದವರನ್ನು ಕರೆಸಲಾಗಿದೆ. ಚತುರ ಶ್ವಾನ ಬ್ಯಾಗ್ ನಲ್ಲಿರುವ ಬಾಂಬ್ ಕುರಿತು ತನ್ನ ಚಟುವಟಿಕೆ ಮೂಲಕ ಪ್ರತಿಕ್ರಿಯೆ ತಿಳಿಸಿದೆ. ತಕ್ಷಣ ಜಾಗೃತವಾದ ಸಿಬ್ಬಂದಿ ಬ್ಯಾಗ್ ಅನ್ನು ವೆಹಿಕಲ್ ಮೂಲಕ ತೆಗೆದುಕೊಂಡು ಹೋಗಿದ್ದು, ಬಾಂಬ್ ನಿಷ್ಕ್ರೀಯ ದಳ ಸಮರ್ಥ ಕಾರ್ಯ ನಿರ್ವಹಿಸಿದೆ.
ಬಾಂಬ್ ಗುರುತಿಸಿರುವ ಚತುರ ಶ್ವಾನದ ಹೆಸರು ಜಾಕ್ ಈ ಶ್ವಾನ ಬ್ಯಾಗ್ ನಲ್ಲಿ ಬಾಂಬ್ ಇರುವದನ್ನು ತನ್ನ ಚತುರತೆ ಮೂಲಕ ಶ್ವಾಸ ಉಸ್ವಾಸ ಎಳೆದುಕೊಂಡು ತಕ್ಷಣ ಪ್ರತಿಕ್ರಿಯೆಯನ್ನ ನೀಡಿದೆ. ಕೂಡಲೇ ಅರಿತ ಸಿಬ್ಬಂದಿ ಬಾಂಬ್ ನಿಷ್ಕ್ರೀಯಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಆ ಬಾಂಬ್ ಅನ್ನು ಮಂಗಳೂರಿನ ಕೆಂಜಾರು ಮೈದಾನದಲ್ಲಿ ಮರಳು ತುಂಬಿದ ಚೀಳಗಳ ಮದ್ಯ ಇಟ್ಟು ಸಿಬ್ಬಂದಿ ಅದನ್ನು ಸ್ಪೋಟಿಸುವ ಮೂಲಕ ಅದರ ಶಕ್ತಿ ಎಷ್ಟಿತ್ತು ಏನೇನ್ ಆಪತ್ತು ತರುತಿತ್ತು ಎಂಬುದನ್ನು ಕಂಡುಕೊಂಡಿದ್ದು, ಬಾಂಬ್ ತಂದಿಟ್ಟವರಾರು ಎಂಬುದನ್ನು ಪತ್ತೆ ಮಾಡಲು ಪೊಲೀಸರ ತಂಡ ಕಾರ್ಯೋನ್ಮುಖವಾಗಿದೆ. ಒಟ್ಟಲ್ಲಿ ಮಂಗಳೂರ ವಿಮಾನ ನಿಲ್ದಾಣದಲ್ಲಿ ಸ್ಪೋಟಗೊಳ್ಳುವ ಮುನ್ನ ಬಾಂಬ್ ನ್ನು ನಿಷ್ಕ್ರೀಯಗೊಳಿಸುವ ಮೂಲಕ ದೊಡ್ಡ ದುರಂತವನ್ನು ತಪ್ಪಿಸಿರುವದು ಮಾತ್ರ ಶ್ಲಾಘನೀಯ.
ಸಜಿವ ಬಾಂಬ್ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ವಾನ್ ಜಾಕ್ ಮತ್ತು ಸಿಬ್ಬಂದಿಗೆ ವಿನಯವಾಣಿಯಿಂದ ಒಂದು ಸೆಲ್ಯೂಟ್..