ಪ್ರಮುಖ ಸುದ್ದಿ
ಮಂಗಳೂರು ಬಾಂಬ್ ಪ್ರಕರಣ ಶಂಕಿತ ವ್ಯಕ್ತಿ ಬಂಧನ ವಿಚಾರಣೆ.?
ಮಂಗಳೂರು ಬಾಂಬ್ ಪ್ರಕರಣ ಶಂಕಿತ ವ್ಯಕ್ತಿ ಬಂಧನ ವಿಚಾರಣೆ.?
ಮಂಗಳೂರುಃ ನಗರದ ವಿಮಾನ ನಿಲ್ದಾಣ ಬಳಿ ಆಟೋವೊಂದರೊಳಗರ ಆಗಮಿಸಿದ್ದ ವ್ಯಕ್ತಿಯೋರ್ವ ಬಾಂಬ್ ಇದ್ದ ಬ್ಯಾಗ್ ಇಟ್ಟು ಹೋಗುವದನ್ನು ಹಲವು ಸಿಸಿ ಕ್ಯಾಮೆರಾ ಮೂಲಕ ಕಂಡುಕೊಂಡಿದ್ದ ಪೊಲೀಸರು ಇಂದು ಶಂಕಿತ ವ್ಯಕ್ತಿಯೋರ್ವನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಶಂಕಿತ ವ್ಯಕ್ತಿ ಟೋಪಿ ಧರಿಸಿ ಆಟೋದಲ್ಕಿ ನಿಲ್ದಾಣಕ್ಕೆ ಆಗಮಿಸಿದ್ದು, ಮತ್ತು ಮರಳುವಾಗ ಬ್ಯಾಗ ಕೈಯಲ್ಲಿ ಇರದಿರುವದು ಸಿಸಿ ಕ್ಯಾಮೆರಾದಲ್ಲಿ ಗಮನಿಸಲಾಗಿದೆ.
ಹೀಗಾಗಿ ಟೋಪಿ ಧರಿಸಿ ಬಂದಿದ್ದ ಆ ವ್ಯಕ್ತಿಯನ್ನು ಈಗ ಪೊಲೀಸರು ಹಿಡಿದಿದ್ದು, ವಿವಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ. ಪೊಲೀಸರ ತನಿಖೆ ನಂತರವೇ ಸತ್ಯಾಸತ್ಯತೆ ಹೊರಬೀಳಲಿದೆ.




